Wednesday, June 26, 2024
Homeಕೊಡಗುಭರ್ತಿಯಾದ ಹಾರಂಗಿ ಜಲಾಶಯ: ಸಚಿವರಿಂದ ಕಾವೇರಿಗೆ ಬಾಗಿನ

ಭರ್ತಿಯಾದ ಹಾರಂಗಿ ಜಲಾಶಯ: ಸಚಿವರಿಂದ ಕಾವೇರಿಗೆ ಬಾಗಿನ

spot_img
- Advertisement -
- Advertisement -

ಮಡಿಕೇರಿ: ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕೊಡಗು ಜಿಲ್ಲೆಯ ಕುಶಾಲನಗರದ ಹಾರಂಗಿ ಜಲಾಶಯ ಭರ್ತಿಯಾಗಿದೆ. ಈ ಹಿನ್ನೆಲೆಯಲ್ಲಿ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಜಲಾಶಯಕ್ಕೆ ಬಾಗಿನ ಅರ್ಪಿಸಿದ್ದಾರೆ. ಕಾವೇರಿ ಮಾತೆಗೆ ಪೂಜೆ ಸಲ್ಲಿಸಿ ನಂತರ‌ ಸಚಿವರು ಜಲಾಶಯಕ್ಕೆ ಬಾಗಿನ ಅಪಿ೯ಸಿದರು.

1859 ಅಡಿಗಳ ಸಾಮಥ್ಯ೯ ಹೊಂದಿರುವ ಹಾರಂಗಿ ಜಲಾಶಯ 1857 ಅಡಿಗಳಷ್ಟು ಭತಿ೯ಯಾಗಿದೆ. ಸದ್ಯ 16000 ಕ್ಕೂ ಅಧಿಕ ಕ್ಯೂಸೆಕ್ಸ್ ಒಳ ಹರಿವಿದೆ. ಹಾಗಾಗಿ ನೀರಾವರಿ ಸಲಹಾ ಸಮಿತಿಯ ತೀಮಾ೯ನದಂತೆ 2021-22 ನೇ ಸಾಲಿನ ಖಾರೀಪ್ ಬೆಳೆಗಳು ಮತ್ತು ಕೆರೆ ಕಟ್ಟೆಗಳಿಗೆ ಹರಿಸುವ ಕಾಯ೯ಕ್ಕೆ ಚಾಲನೆ ನೀಡಲಾಗಿದೆ. ಬಾಗಿನ ಅರ್ಪಿಸಿದ ಬಳಿಕ ಜಿಲ್ಲಾ ಉಸ್ತುವಾರಿ ಸಚಿವ ಸೋಮಣ್ಣ ಅಧ್ಯಕ್ಷತೆಯಲ್ಲಿ ಹಾರಂಗಿ ಜಲಾಶಯ ನೀರಾವರಿ ಸಲಹಾ ಸಮಿತಿಯ ಸಭೆ ನಡೆಯಿತು.

ಸಭೆಯಲ್ಲಿ ಕ್ರಿಯಾ ಯೋಜನೆ ತಯಾರಿಸಬೇಕು, ಉದ್ಯಾನವನ್ನು ಇನ್ನಷ್ಟು ವಿಸ್ತರಿಸಿ ಅಭಿವೃದ್ದಿಗೊಳಿಸಬೇಕು, ಕೊನೆಯ ಭಾಗಕ್ಕೆ ಮೊದಲು ನೀರು ಹರಿಸುವ ಕೆಲಸ ಆಗಬೇಕು ಎಂಬ ಅಂಶಗಳ ಬಗ್ಗೆ ಕ್ರಮವಹಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸಚಿವ ಸೋಮಣ್ಣ ಸೂಚಿಸಿದರು. ಬಾಗಿನ ಅರ್ಪಣೆ ಕಾರ್ಯಕ್ರಮದಲ್ಲಿ ಸಂಸದ ಪ್ರತಾಪ್ ಸಿಂಹ, ಶಾಸಕರಾದ ಅಪ್ಪಚ್ಚು ರಂಜನ್, ಎ.ಟಿ. ರಾಮಸ್ವಾಮಿ, ಮಹದೇವು, ವಿಧಾನಪರಿಷತ್ ಸದಸ್ಯರಾದ ಸುನಿಲ್ ಸುಬ್ರಹ್ಮಣಿ, ಗೋಪಾಲಸ್ವಾಮಿ, ಕೊಡಗು ಡಿಸಿ ಮತ್ತು ಎಸ್ಪಿ ಪಾಲ್ಗೊಂಡಿದ್ದರು.

- Advertisement -
spot_img

Latest News

error: Content is protected !!