Sunday, June 14, 2026
Homeತಾಜಾ ಸುದ್ದಿ56 ನಿಮಿಷಗಳಲ್ಲಿ 10 ಕಿ.ಮೀ. ಓಡಿ ಬೆಂಗಳೂರು ಲೇಕ್ ರನ್ ಮ್ಯಾರಥಾನ್ ಪೂರೈಸಿದ ಸಚಿವ

56 ನಿಮಿಷಗಳಲ್ಲಿ 10 ಕಿ.ಮೀ. ಓಡಿ ಬೆಂಗಳೂರು ಲೇಕ್ ರನ್ ಮ್ಯಾರಥಾನ್ ಪೂರೈಸಿದ ಸಚಿವ

- Advertisement -
- Advertisement -

ಬೆಂಗಳೂರು: ಬೆಂಗಳೂರು ನಗರಾಭಿವೃದ್ಧಿ ಇಲಾಖೆ ಸಚಿವ ಕೃಷ್ಣ ಭೈರೇಗೌಡ ಇಂದು ಲೇಕ್ ರನ್ ಮ್ಯಾರಥಾನ್ ನಲ್ಲಿ ಭಾಗವಹಿಸಿ 56 ನಿಮಿಷಗಳಲ್ಲಿ 10 ಕಿಲೋ ಮೀಟರ್ ಓಡಿ ಗಮನ ಸೆಳೆದಿದ್ದಾರೆ.

ಬೆಂಗಳೂರಿನ ಜಕ್ಕೂರು ಕೆರೆಯಿಂದ ರಾಚೇನಹಳ್ಳಿ ಕೆರೆಯವರೆಗೆ ಆಯೋಜಿಸಿದ್ದ ಬೆಂಗಳೂರು ಲೇಕ್ ರನ್ ಮ್ಯಾರಥಾನ್ ನಲ್ಲಿ ಸುಮಾರು 1500 ರಷ್ಟು ಜನ ಭಾಗವಹಿಸಿದ್ದರು.

ಮಕ್ಕಳು ಸೇರಿದಂತೆ ಸಾರ್ವಜನಿಕರಲ್ಲಿ ಪರಿಸರ ಹಾಗೂ ದೈಹಿಕ ಆರೋಗ್ಯದ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಇದೇ ಮೊದಲ ಬಾರಿಗೆ ಬೆಂಗಳೂರು ಲೇಕ್ ರನ್ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಬೆಂಗಳೂರು ನಗರಾಭಿವೃದ್ಧಿ ಇಲಾಖೆಯನ್ನು ವಹಿಸಲಾಗಿದ್ದರೂ ಇನ್ನೂ ಪೂರ್ಣ ಪ್ರಮಾಣದಲ್ಲಿ ಸಚಿವ ಕೃಷ್ಣ ಭೈರೇಗೌಡ ಖಾತೆಯನ್ನು ವಹಿಸಿಕೊಂಡಿಲ್ಲ.

- Advertisement -

Latest News

error: Content is protected !!