Sunday, June 14, 2026
Homeಕರಾವಳಿಮಂಗಳೂರುಬಂಟ್ವಾಳ; ಮಾಣಿ ಶ್ರೀ ಉಳ್ಳಾಲ್ತಿ ದೈವಸ್ಥಾನದ ರಸ್ತೆ ಬದಿಯಲ್ಲಿ ದುರ್ನಾತ ಬೀರುತ್ತಿದೆ ಕಸದ ರಾಶಿ: ಸ್ಥಳೀಯರ...

ಬಂಟ್ವಾಳ; ಮಾಣಿ ಶ್ರೀ ಉಳ್ಳಾಲ್ತಿ ದೈವಸ್ಥಾನದ ರಸ್ತೆ ಬದಿಯಲ್ಲಿ ದುರ್ನಾತ ಬೀರುತ್ತಿದೆ ಕಸದ ರಾಶಿ: ಸ್ಥಳೀಯರ ಆಕ್ರೋಶ

- Advertisement -
- Advertisement -

ಬಂಟ್ವಾಳ; ಮಾಣಿ ಶ್ರೀ ಉಳ್ಳಾಲ್ತಿ ದೈವಸ್ಥಾನದ ರಸ್ತೆ ಬದಿಯಲ್ಲಿ ದೈವಸ್ಥಾನದ ದಾರಿ ಅನ್ನೋದನ್ನು ಲೆಕ್ಕಿಸದೇ ರಾಶಿ ರಾಶಿ ಕಸ ಸುರಿಯುತ್ತಿದ್ದು ರಸ್ತೆಯಲ್ಲಿ ಮೂಗು ಮುಚ್ಚಿಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಸ್ಥಳೀಯರು ಹಿಡಿಶಾಪ ಹಾಕುತ್ತಿದ್ದಾರೆ.

ನೆಟ್ಲಮುನ್ನೂರು ನೇರಳಕಟ್ಟೆ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಬರುವ ಈ ಸ್ಥಳದಲ್ಲಿ ಕಳೆದ ಹಲವು ತಿಂಗಳಿನಿಂದ ಕೋಳಿ ಅಂಗಡಿ ತ್ಯಾಜ್ಯ, ಹೋಟೆಲ್ ನ ತ್ಯಾಜ್ಯ, ಪ್ಲಾಸ್ಟಿಕ್‌ ಹಾಗೂ ಮನೆಯ ಕಸವನ್ನು ತಂದು ದೈವಸ್ಥಾನದ ರಸ್ತೆ ಅನ್ನೋದನ್ನು ಮರೆತು ತಂದು ಸುರಿಯಲಾಗುತ್ತಿದೆ. ಕಸದ ರಾಶಿ ರಸ್ತೆಯ ಅರ್ಧ ಭಾಗವನ್ನು ಆವರಿಸಿದ್ದು, ದ್ವಿಚಕ್ರ ವಾಹನ ಸವಾರರು, ಪಾದಚಾರಿಗಳಿಗೆ ಇಲ್ಲಿ ಸಂಚರಿಸೋದೇ ಸವಾಲಾಗಿದೆ.

ಸದ್ಯ ಮಳೆಗಾಲ ಆರಂಭವಾಗಿದ್ದು ಈ ಕಸದ ಸಮಸ್ಯೆಗೆ ಮುಕ್ತಿ ಸಿಗದೇ ಇದ್ದರೆ ಡೆಂಗ್ಯೂ, ಮಲೇರಿಯಾದಂತಹ ಕಾಯಿಲೆಗಳು ಬರೋದು ಪಕ್ಕಾ ಅಂತಿದ್ದಾರೆ ಸ್ಥಳೀಯರು. ಹಾಗಾಗಿ  ಈ ಸ್ಥಳದಲ್ಲಿ ಸಿಸಿ ಕ್ಯಾಮರಾ ಅಳವಡಿಸಿ ರಾತ್ರಿ ವೇಳೆ ಯಾರು ಇಲ್ಲಿ ಕಸ ತಂದು ಸುರಿಯುತ್ತಾರೋ ಅಂತಹವರಿಗೆ ದಂಡ ಹಾಕ್ಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

- Advertisement -

Latest News

error: Content is protected !!