Saturday, June 6, 2026
Homeಕರಾವಳಿಮಂಗಳೂರುದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಗೆ ಮಿಸ್ ಆದ ವಿಮಾನ; ಇಂದಿನ ಮಂಗಳೂರು...

ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಗೆ ಮಿಸ್ ಆದ ವಿಮಾನ; ಇಂದಿನ ಮಂಗಳೂರು ಭೇಟಿ ರದ್ದು

- Advertisement -
- Advertisement -

ಮಂಗಳೂರು: ಮಳೆಯ ಕಾರಣದಿಂದಾಗಿ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರ ಇಂದಿನ ಜಿಲ್ಲಾ ಭೇಟಿ ರದ್ದುಗೊಂಡಿದೆ.

ಬೆಂಗಳೂರಿನ ಕೆಂಪೇಗೌಡ ಏರ್ ಪೋರ್ಟ್ ಗೆ ತೆರಳುವ ಮಾರ್ಗದಲ್ಲಿ ಲಾರಿ ಪಲ್ಟಿಯಾಗಿ ರಸ್ತೆ ಬಂದ್ ಆಗಿದ್ದ ಕಾರಣ ಸಚಿವ ದಿನೇಶ್ ಗುಂಡೂರಾವ್ ಗೆ ಮಂಗಳೂರಿಗೆ ತೆರಳಬೇಕಿದ್ದ ವಿಮಾನ ಮಿಸ್ ಆಗಿದೆ.

ಮಂಗಳೂರು ವಿಮಾನ ಮಿಸ್ ಆಗಿರುವ ಕಾರಣ ದಕ್ಷಿಣ ಕನ್ನಡ ಜಿಲ್ಲಾ ಭೇಟಿ ರದ್ದಾಗಿದ್ದು, ಅಧಿವೇಶನ ಮುಗಿದ ಬಳಿಕ ಭೇಟಿ ನೀಡುವ ಸಾಧ್ಯತೆ ಇದೆ.

ಜಿಲ್ಲೆಯ ಅದ್ಯಪಾಡಿ, ಕೆತ್ತಿಕಲ್ ಮತ್ತು ಪಾಣೆಮಂಗಳೂರಿನ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಬೇಕಿದ್ದ ಸಚಿವ ದಿನೇಶ್ ಗುಂಡೂರಾವ್, ಬಳಿಕ ಮಳೆ ಹಾನಿ ಹಾಗೂ ಪರಿಹಾರ ಕಾರ್ಯಗಳ ಬಗ್ಗೆ ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ಸಭೆ ಕೂಡಾ ನಿಗದಿಯಾಗಿತ್ತು.

- Advertisement -

Latest News

error: Content is protected !!