Friday, June 5, 2026
Homeಕರಾವಳಿಕಡಬ; ನೇಣು ಬಿಗಿದುಕೊಂಡು ಯುವಕ ಆತ್ಮಹತ್ಯೆ

ಕಡಬ; ನೇಣು ಬಿಗಿದುಕೊಂಡು ಯುವಕ ಆತ್ಮಹತ್ಯೆ

- Advertisement -
- Advertisement -

ಕಡಬ; ನೇಣು ಬಿಗಿದುಕೊಂಡು ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಳಾರ ಸಮೀಪದ ತಿಮರಡ್ಡ ಎಂಬಲ್ಲಿ ನಡೆದಿದೆ.ತಿಮರಡ್ಡ ನಿವಾಸಿ ಅಝರ್ (28) ಮೃತ ಯುವಕ.

ಟಿಂಬರ್ ಕೆಲಸ ಮಾಡುತ್ತಿದ್ದ ಅಝರ್ ಕೆಲಸಕ್ಕೆ ಹೋಗಿ ಎಂದಿನಂತೆ ಮನೆಗೆ ಬಂದಿದ್ದಾರೆ. ಬರುವಾಗ ಮಗುವಿಗೆ ತಿಂಡಿ ತಂದಿದ್ದರು. ಬಳಿಕ ಕೋಣೆಯೊಳಗೆ ಹೋಗಿ ತಾಯಿಯ ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಕಡಬ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

- Advertisement -

Latest News

error: Content is protected !!