Saturday, June 27, 2026
Homeಕರಾವಳಿಬಂಟ್ವಾಳ : ಲಾರಿಯಲ್ಲಿದ್ದ ಸಿ.ಎನ್.ಜಿ ಗ್ಯಾಸ್ ಸೋರಿಕೆ

ಬಂಟ್ವಾಳ : ಲಾರಿಯಲ್ಲಿದ್ದ ಸಿ.ಎನ್.ಜಿ ಗ್ಯಾಸ್ ಸೋರಿಕೆ

- Advertisement -
- Advertisement -

ಬಂಟ್ವಾಳ : ಪೆಟ್ರೋಲ್ ಪಂಪ್ ಗೆ ಲಾರಿಯಲ್ಲಿ ಸಾಗಿಸುತ್ತಿದ್ದ ಸಿ.ಎನ್.ಜಿ ಗ್ಯಾಸ್ ರಸ್ತೆಯಲ್ಲಿ ಸೋರಿಕೆಯಾದ ಘಟನೆ ಬಂಟ್ವಾಳದಲ್ಲಿ ನಡೆದಿದೆ.

ಬಂಟ್ವಾಳ ತಾಲೂಕಿನ ರಾಷ್ಟ್ರೀಯ ಹೆದ್ದಾರಿಯ ಕೊಪ್ಪ ಎಂಬಲ್ಲಿ ಜು.21 ರಂದು ಬೆಳಗ್ಗೆ ಮಂಗಳೂರಿನಿಂದ ಬೆಳ್ತಂಗಡಿ ಪೆಟ್ರೋಲ್ ಪಂಪ್ ಗೆ ಲಾರಿಯಲ್ಲಿ ಸಾಗಾಟ ಮಾಡುತ್ತಿದ್ದ ಸಿ.ಎನ್.ಜಿ ಗ್ಯಾಸ್ ಸೋರಿಕೆಯಾಗಿದೆ. ತಕ್ಷಣ ಚಾಲಕ ಲಾರಿಯನ್ನು ಪಕ್ಕಕ್ಕೆ ಹಾಕಿ ಬಟ್ಟೆಯಿಂದ ಗ್ಯಾಸ್ ಸೋರಿಕೆ ತಡೆಯಲು ಯತ್ನಿಸಿದರೂ ಪ್ರಯೋಜನವಾಗಿಲ್ಲ. ರಸ್ತೆಯಲ್ಲಿ ಬರುತ್ತಿದ್ದ ಕಾರಿನವರು ಕೂಡ ಸೋರಿಕೆಯನ್ನು ತಡೆಯಲು ಯತ್ನಿಸಿದರೂ ಆದ್ರೆ ಗ್ಯಾಸ್ ಸೋರಿಕೆಯಿಂದ ಉಸಿರಾಟ ಸಮಸ್ಯೆ ಅಗಿದ್ದರಿಂದ ಅಲ್ಲಿಂದ ಹೋಗಿದ್ದು. ಕೊನೆಗೆ ಬಂಟ್ವಾಳ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ರೂ ಒಂದು ಗಂಟೆಯಾದ್ರೂ ಸ್ಥಳಕ್ಕೆ ಬಂದಿಲ್ಲ ಎನ್ನಲಾಗಿದೆ. ಘಟನೆಯ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

- Advertisement -

Latest News

error: Content is protected !!