Thursday, June 4, 2026
Homeತಾಜಾ ಸುದ್ದಿಬಂಧನ ಭೀತಿಯಲ್ಲಿ ನಟ ರಕ್ಷಿತ್ ಶೆಟ್ಟಿ; ಜಾಮೀನಿಗಾಗಿ ಸೆಷನ್ಸ್‌ ಕೋರ್ಟ್‌ಗೆ ಅರ್ಜಿ ಸಲ್ಲಿಕೆ

ಬಂಧನ ಭೀತಿಯಲ್ಲಿ ನಟ ರಕ್ಷಿತ್ ಶೆಟ್ಟಿ; ಜಾಮೀನಿಗಾಗಿ ಸೆಷನ್ಸ್‌ ಕೋರ್ಟ್‌ಗೆ ಅರ್ಜಿ ಸಲ್ಲಿಕೆ

- Advertisement -
- Advertisement -

ಬೆಂಗಳೂರು: ಕಾಪಿ ರೈಟ್ಸ್‌ ಉಲ್ಲಂಘನೆ ಆರೋಪ ಎದುರುಸುತ್ತಿರುವ ನಟ ರಕ್ಷಿತ್ ಶೆಟ್ಟಿಗೆ ಇದೀಗ  ಬಂಧನ ಭೀತಿ ಎದುರಾಗಿದೆ.

ಬಂಧನ ಭೀತಿಯಲ್ಲಿರುವ ನಟ ರಕ್ಷಿತ್‌ ಶೆಟ್ಟಿ ನಿರೀಕ್ಷಣಾ ಜಾಮೀನಿಗೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.  ವಿಚಾರಣೆ ನಡೆಸಿದ ಸಿಸಿಎಚ್‌ 61ನೇ ನ್ಯಾಯಾಲಯವು ವಿಚಾರಣೆಯನ್ನು ಜುಲೈ 24ಕ್ಕೆ ಮುಂದೂಡಿದೆ.ರಕ್ಷಿತ್‌ ಶೆಟ್ಟಿ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಸರ್ಕಾರಿ ಅಭಿಯೋಜಕರು ಕಾಲವಕಾಶ ಕೋರಿದ ಹಿನ್ನೆಲೆಯಲ್ಲಿ ವಿಚಾರಣೆ ಮುಂದೂಡಲಾಗಿದೆ.

ರಕ್ಷಿತ್‌ ಶೆಟ್ಟಿ ಒಡೆತನದ ಪರಂವಃ ಸ್ಟುಡಿಯೋಸ್‌ ನಿರ್ಮಿಸಿರುವ ರಕ್ಷಿತ್‌ ಶೆಟ್ಟಿ ನಟನೆಯ ಬ್ಯಾಚುಲರ್ಸ್‌ ಪಾರ್ಟಿ ಸಿನಿಮಾಗಾಗಿ “ನ್ಯಾಯ ಎಲ್ಲಿದೆ’ ಹಾಡಿನ ಕಾಪಿ ರೈಟ್ಸ್‌ ಉಲ್ಲಂಘಿಸಿ ಅನಧಿಕೃತವಾಗಿ ಬಳಸಿರುವ ಆರೋಪ ಕೇಳಿ ಬಂದಿತ್ತು. ಬ್ಯಾಚುಲರ್‌ ಪಾರ್ಟಿ ಸಿನಿಮಾದಲ್ಲಿ “ನ್ಯಾಯ ಎಲ್ಲಿದೆ’, ಒಮ್ಮೆ ನಿನ್ನನ್ನು’ ಹಾಡುಗಳನ್ನು ಅನುಮತಿ ಪಡೆಯದೆ ಕಾನೂನು ಬಾಹಿರವಾಗಿ ಬಳಸಿದ್ದಾರೆ ಎಂದು ಆರೋಪಿಸಿ ಎಂಆರ್‌ಟಿ ಮ್ಯೂಸಿಕ್‌ ಸಂಸ್ಥೆಯ ನವೀನ್‌ ಕುಮಾರ್‌ ದೂರು ನೀಡಿದು, ಯಶವಂತಪುರ ಪೊಲೀಸ್‌ ಠಾಣೆಯಲ್ಲಿ ರಕ್ಷಿತ್‌ ಶೆಟ್ಟಿ ವಿರುದ್ಧ ಪ್ರಕರಣ ದಾಖಲಾಗಿತ್ತು.

- Advertisement -

Latest News

error: Content is protected !!