Wednesday, July 15, 2026
Homeಕರಾವಳಿಮಂಗಳೂರುರಬ್ಬರ್ ಬೆಳೆಗಾರರ ಹಿತ ಕಾಯುವಂತೆ ಕೇಂದ್ರ ಸಚಿವರಿಗೆ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಪತ್ರ

ರಬ್ಬರ್ ಬೆಳೆಗಾರರ ಹಿತ ಕಾಯುವಂತೆ ಕೇಂದ್ರ ಸಚಿವರಿಗೆ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಪತ್ರ

- Advertisement -
- Advertisement -

ಬೆಂಗಳೂರು: ರಬ್ಬರ್ ಬೆಳೆಗಾರರ ಸಮಸ್ಯೆ ಪರಿಹರಿಸುವಂತೆ ಕೇಂದ್ರ ಸಚಿವರಿಗೆ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಪತ್ರ ಬರೆದಿದ್ದಾರೆ.

ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಷಿ, ಹೆಚ್.ಡಿ. ಕುಮಾರಸ್ವಾಮಿ, ವಿ. ಸೋಮಣ್ಣ ಮತ್ತು ಶೋಭಾ ಕರಂದ್ಲಾಜೆ ಅವರಿಗೆ ಪತ್ರ ಬರೆದು ಕೇಂದ್ರ ವಾಣಿಜ್ಯ ಇಲಾಖೆಯಲ್ಲಿ ತಮ್ಮ ಪ್ರಭಾವ ಬಳಸಿ ರಬ್ಬರ್ ಬೆಳೆಗಾರರ ನೆರವಿಗೆ ಧಾವಿಸುವಂತೆ ಸಚಿವ ದಿನೇಶ್ ಗುಂಡೂರಾವ್ ಮನವಿ ಮಾಡಿದ್ದಾರೆ.

ಕೃತಕ ರಬ್ಬರ್ ಲಭ್ಯತೆ, ಬೆಲೆ ಇಳಿಕೆ ಮತ್ತು ರಬ್ಬರ್ ಆಮದು ಮುಂತಾದ ಕಾರಣಗಳಿಂದ ರಬ್ಬರ್ ಬೆಳೆಗಾರರು ಕಂಗಾಲಾಗಿದ್ದು, ಬೆಳೆಗಾರರ ಹಿತ ಕಾಯುವಂತೆ ಪತ್ರದಲ್ಲಿ ದಿನೇಶ್ ಗುಂಡೂರಾವ್ ಆಗ್ರಹಿಸಿದ್ದಾರೆ.

ಅಲ್ಲದೇ ಕೇಂದ್ರ ಸಚಿವರುಗಳಿಗೆ ಬರೆದಿರುವ ಮನವಿ ಪತ್ರದ ಫಾಲೋ ಅಪ್ ಮಾಡುವಂತೆ ನವದೆಹಲಿಯ ಕರ್ನಾಟಕ ಭವನದ ನಿವಾಸಿ ಆಯುಕ್ತರಿಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಮನವಿ ಮಾಡಿದ್ದಾರೆ

- Advertisement -

Latest News

error: Content is protected !!