Saturday, August 22, 2026
Homeತಾಜಾ ಸುದ್ದಿತಹಸೀಲ್ದಾರ್ ಕಚೇರಿಯ ಕೊಳಕು ಶೌಚಾಲಯ ಸ್ವಚ್ಛಗೊಳಿಸಿದ ಸಚಿವ!

ತಹಸೀಲ್ದಾರ್ ಕಚೇರಿಯ ಕೊಳಕು ಶೌಚಾಲಯ ಸ್ವಚ್ಛಗೊಳಿಸಿದ ಸಚಿವ!

- Advertisement -
- Advertisement -

ಹೈದರಾಬಾದ್: ಸಚಿವರೊಬ್ಬರು ತಹಸೀಲ್ದಾರ್ ಕಚೇರಿಯ ಕೊಳಕಾಗಿದ್ದ ಶೌಚಾಲಯವನ್ನು ಸ್ವಚ್ಛಗೊಳಿಸಿದ ಘಟನೆ ತೆಲಂಗಾಣ ರಾಜ್ಯದಲ್ಲಿ ನಡೆದಿದೆ.

ತೆಲಂಗಾಣದ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಇಲಾಖೆ ಸಚಿವ ಜೂಪಲ್ಲಿ ಕೃಷ್ಣ ರಾವ್‌ ಪೆಂಟ್ಲವೆಲ್ಲಿ ತಹಸೀಲ್ದಾರ್ ಕಚೇರಿಯಲ್ಲಿ ಅನಿರೀಕ್ಷಿತ ಭೇಟಿ ನೀಡಿ ತಪಾಸಣೆ ನಡೆಸಿದ್ದ ವೇಳೆ ಶೌಚಾಲಯ ಗಲೀಜಾಗಿರುವುದು ಗಮನಕ್ಕೆ ಬಂದಿದೆ.

ತಹಸೀಲ್ದಾರ್ ಕಚೇರಿಯ ಕೊಳಕು ಶೌಚಾಲಯ ಕಂಡು ಸಿಟ್ಟಾದ ಸಚಿವ ಕೃಷ್ಣ ರಾವ್,ನಂತರ ಸ್ವತಃ ತಾವೇ ನೀರು ಸುರಿದು ಶೌಚಾಲಯವನ್ನು ಸ್ವಚ್ಛಗೊಳಿಸಿದ್ದಾರೆ.

ಬಳಿಕ ಕಚೇರಿಯಲ್ಲಿ ಸ್ವಚ್ಛತೆ ಕಾಪಾಡುವಂತೆ ತಹಸೀಲ್ದಾರ್ ಕಚೇರಿಯ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

- Advertisement -

Latest News

error: Content is protected !!