Saturday, August 22, 2026
Homeಕರಾವಳಿಮಂಗಳೂರುದರ್ಶನ್‌ಗೆ ‘ಮಾಫಿ ಸಾಕ್ಷಿ’ ಸಂಕಷ್ಟ: ಮಂಗಳೂರಿನಲ್ಲಿ ದೈವದ ಮೊರೆ ಹೋದ ಪತ್ನಿ ವಿಜಯಲಕ್ಷ್ಮಿ!

ದರ್ಶನ್‌ಗೆ ‘ಮಾಫಿ ಸಾಕ್ಷಿ’ ಸಂಕಷ್ಟ: ಮಂಗಳೂರಿನಲ್ಲಿ ದೈವದ ಮೊರೆ ಹೋದ ಪತ್ನಿ ವಿಜಯಲಕ್ಷ್ಮಿ!

- Advertisement -
- Advertisement -

ಮಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ಗೆ ಪ್ರದೋಶ್ ‘ಮಾಫಿ ಸಾಕ್ಷಿ’ಯಾಗುತ್ತಿರುವುದು ಭಾರಿ ಹಿನ್ನಡೆಯಾಗುವ ಸಾಧ್ಯತೆ ಬೆನ್ನಲ್ಲೇ, ಪತ್ನಿ ವಿಜಯಲಕ್ಷ್ಮಿ ದರ್ಶನ್ ಕರಾವಳಿಯ ದೈವದ ಮೊರೆ ಹೋಗಿದ್ದಾರೆ.

ದರ್ಶನ್ ಕಾನೂನು ಸಮರದಿಂದ ಶೀಘ್ರವೇ ಹೊರಬರಲಿ ಎಂದು ಪ್ರಾರ್ಥಿಸಿ ವಿಜಯಲಕ್ಷ್ಮಿ ಅವರು ಮಂಗಳೂರಿನ ಶ್ರೀ ಕ್ಷೇತ್ರ ಮಂದಾರಬೈಲು ರಕ್ತೇಶ್ವರಿ ಮತ್ತು ಮಂತ್ರಜಾವದೆ ದೈವದ ಸನ್ನಿಧಿಗೆ ಭೇಟಿ ನೀಡಿ ವಿಶೇಷ ಪೂಜೆ ಹಾಗೂ ಹರಕೆ ಸಮರ್ಪಿಸಿದ್ದಾರೆ.

ದರ್ಶನ್ ಅವರ ಮಂಗಳೂರಿನ ಆಪ್ತ ಗೆಳೆಯರ ಮೂಲಕ ಈ ದೈವಸ್ಥಾನದ ಸಂಪರ್ಕ ಪಡೆದಿದ್ದ ವಿಜಯಲಕ್ಷ್ಮಿ, ದೈವದ ಸನ್ನಿಧಿಯಲ್ಲಿ ವಿಶೇಷ ಸೇವೆಗಳನ್ನು ನೆರವೇರಿಸಿದ್ದಾರೆ. ಪ್ರಕರಣದಲ್ಲಿ ಪ್ರದೋಶ್ ಮಾಫಿ ಸಾಕ್ಷಿಯಾಗುತ್ತಿರುವುದರಿಂದ ದರ್ಶನ್‌ಗೆ ಗಂಡಾಂತರ ಎದುರಾಗಿದ್ದು, ಈ ಕಂಟಕದಿಂದ ಪಾರಾಗಲು ಕರಾವಳಿಯ ಕಾರಣಿಕ ದೈವಗಳಿಗೆ ಹರಕೆ ಹೊತ್ತಿದ್ದಾರೆ ಎನ್ನಲಾಗಿದೆ.

- Advertisement -

Latest News

error: Content is protected !!