Saturday, October 17, 2026
Homeತಾಜಾ ಸುದ್ದಿಆಯುಧ ಪೂಜೆಯಂದು ವಾಲಿಬಾಲ್ ಆಡಿ ರಿಲ್ಯಾಕ್ಸ್ ಆದ ಸಚಿವ ಅಶ್ವತ್ಥ್ ನಾರಾಯಣ್ ಹಾಗೂ ಸಂಸದ ತೇಜಸ್ವಿ...

ಆಯುಧ ಪೂಜೆಯಂದು ವಾಲಿಬಾಲ್ ಆಡಿ ರಿಲ್ಯಾಕ್ಸ್ ಆದ ಸಚಿವ ಅಶ್ವತ್ಥ್ ನಾರಾಯಣ್ ಹಾಗೂ ಸಂಸದ ತೇಜಸ್ವಿ ಸೂರ್ಯ

- Advertisement -
- Advertisement -

ಬೆಂಗಳೂರು: ಆಯುಧ ಪೂಜೆ ದಿನದಂದು ಸಚಿವ ಮತ್ತು ಸಂಸದರಿಬ್ಬರು ಬೆಂಗಳೂರಿನಲ್ಲಿ ಇಂದು ವಾಲಿಬಾಲ್ ಪಂದ್ಯಾಟದಲ್ಲಿ ಪಾಲ್ಗೊಂಡಿದ್ದರು.

ಮಲ್ಲೇಶ್ವರಂನ ನವೀಕೃತ ಚಂದ್ರಶೇಖರ ಆಜಾದ್ ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ವಾಲಿಬಾಲ್ ಪಂದ್ಯಾಟದಲ್ಲಿ ಉನ್ನತ ಶಿಕ್ಷಣ ಸಚಿವ ಡಾ. ಅಶ್ವಥ್ ನಾರಾಯಣ ಮತ್ತು ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ವಾಲಿಬಾಲ್ ಆಟ ಆಡಿದರು.

ಬಿಜೆಪಿ ಯುವ ಮೋರ್ಛಾದ ತಂಡಗಳ ನಡುವೆ ವಾಲಿಬಾಲ್ ಪಂದ್ಯಾಟ ಆಯೋಜಿಸಲಾಗಿತ್ತು. ಇದಕ್ಕೂ ಮುನ್ನ ಮೈದಾನದಲ್ಲಿ ಸಚಿವ ಡಾ‌. ಅಶ್ವಥ್ ನಾರಾಯಣ ಮತ್ತು ಸಂಸದ ತೇಜಸ್ವಿ ಸೂರ್ಯ ಶಟಲ್ ಬ್ಯಾಡ್ಮಿಂಟನ್ ಆಟದಲ್ಲಿ ಕೂಡಾ ಭಾಗಿಯಾಗಿದ್ದರು.

- Advertisement -

Latest News

error: Content is protected !!