Friday, June 5, 2026
Homeಕರಾವಳಿಉಡುಪಿಉಡುಪಿ ಪ್ರವಾಸದಲ್ಲಿ ಮಂಗಳೂರು ಬನ್ಸ್ ತಿಂದು ಸೋಷಿಯಲ್ ಮೀಡಿಯಾದಲ್ಲಿ ಖುಷಿ ಹಂಚಿಕೊಂಡ ಸಚಿವ ಡಾ. ಅಶ್ವಥ್...

ಉಡುಪಿ ಪ್ರವಾಸದಲ್ಲಿ ಮಂಗಳೂರು ಬನ್ಸ್ ತಿಂದು ಸೋಷಿಯಲ್ ಮೀಡಿಯಾದಲ್ಲಿ ಖುಷಿ ಹಂಚಿಕೊಂಡ ಸಚಿವ ಡಾ. ಅಶ್ವಥ್ ನಾರಾಯಣ

- Advertisement -
- Advertisement -

ಉಡುಪಿ: ವಿವಿಧ ಕಾರ್ಯಕ್ರಮಗಳ ನಿಮಿತ್ತ ಉಡುಪಿ ಜಿಲ್ಲೆಗೆ ಆಗಮಿಸಿದ್ಧ ಉನ್ನತ ಶಿಕ್ಷಣ ಸಚಿವ ಡಾ. ಅಶ್ವಥ್ ನಾರಾಯಣ ದಾರಿ ಮಧ್ಯೆ ಮಯೂರ ಹೋಟೆಲ್ ನಲ್ಲಿ ಮಂಗಳೂರು ಬನ್ಸ್ ಸವಿದಿದ್ದಾರೆ.

ಕೋಟದಲ್ಲಿ ನಡೆದ ಸ್ಥಳೀಯಾಡಳಿತ ಜನಪ್ರತಿನಿಧಿಗಳ ಕ್ರೀಡೋತ್ಸವದ ಉದ್ಘಾಟನೆ ಮತ್ತಿತರ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಸಚಿವ ಅಶ್ವಥ್ ನಾರಾಯಣ ಉಡುಪಿ ಜಿಲ್ಲಾ ಪ್ರವಾಸ ಕೈಗೊಂಡಿದ್ದರು.

ಈ ಭಾಗದ ವಿಶೇಷ ತಿನಿಸುಗಳಾದ ಬನ್ಸ್, ಗೋಳಿ ಬಜಿ, ನೀರ್ ದೋಸೆಗಳನ್ನು ಸವಿಯದಿದ್ದರೆ ಕರಾವಳಿ ಜಿಲ್ಲೆಗಳ ಪ್ರವಾಸ ಪೂರ್ಣವಾಗದು ಎಂದು ಸಚಿವ ಡಾ. ಅಶ್ವಥ್ ನಾರಾಯಣ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಖುಷಿ ಹಂಚಿಕೊಂಡಿದ್ದಾರೆ.

- Advertisement -

Latest News

error: Content is protected !!