Friday, June 5, 2026
Homeಕರಾವಳಿಬಂಟ್ವಾಳದಲ್ಲಿ ಕಾರು ಹಾಗೂ ಪಿಕಪ್ ನಡುವೆ ಅಪಘಾತ; ಮನೆಗೆ ನುಗ್ಗಿದ ಪಿಕಪ್

ಬಂಟ್ವಾಳದಲ್ಲಿ ಕಾರು ಹಾಗೂ ಪಿಕಪ್ ನಡುವೆ ಅಪಘಾತ; ಮನೆಗೆ ನುಗ್ಗಿದ ಪಿಕಪ್

- Advertisement -
- Advertisement -

ಬಂಟ್ವಾಳ: ಕಾರು ಹಾಗೂ ಪಿಕಪ್ ನಡುವೆ ಅಪಘಾತ ಸಂಭವಿಸಿ ಪಿಕಪ್ ವಾಹನ ರಸ್ತೆಯ ಬದಿಯಲ್ಲಿದ್ದ ಮನೆಗೆ ನುಗ್ಗಿದ ಘಟನೆ ತಾಲೂಕಿನ ಬಂಟ್ವಾಳ ಸಮೀಪದ ಮಣಿಹಳ್ಳ ಎಂಬಲ್ಲಿ ಶನಿವಾರ ರಾತ್ರಿ ನಡೆದಿದೆ.

ಪುಂಜಾಲಕಟ್ಟೆಯಿಂದ ಬರುತ್ತಿದ್ದ ಕಾರು ಬಂಟ್ವಾಳ ಕಡೆಯಿಂದ ಬರುತ್ತಿದ್ದ ಮೆಸ್ಕಾಂ ಇಲಾಖೆಗೆ ಸೇರಿದ ಪಿಕಪ್ ವಾಹನಕ್ಕೆ ಢಿಕ್ಕಿ ಹೊಡೆದಿದೆ. ಡಿಕ್ಕಿ ತಪ್ಪಿಸಲು ಪ್ರಯತ್ನಿಸಿದ ಪಿಕಪ್ ವಾಹನ, ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿದ್ದ ಮನೆಗೆ ನುಗ್ಗಿದೆ.

ಘಟನೆಯಿಂದ ಲಕ್ಷಣ್ ಎಂಬವರ ಮನೆಯ ಗೋಡೆ ಜರಿದು ಬಿದ್ದಿದ್ದು ಪ್ರಾಣಾಪಾಯ ಸಂಭವಿಸಿಲ್ಲ. ಸ್ಥಳಕ್ಕೆ ಮೆಲ್ಕಾರ್ ಟ್ರಾಫಿಕ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

- Advertisement -

Latest News

error: Content is protected !!