Thursday, June 4, 2026
Homeತಾಜಾ ಸುದ್ದಿಇನ್ಮುಂದೆ ಕೊರೋನಾ ಸೋಂಕಿತರ ಮನೆಯಷ್ಟೇ ಸೀಲ್ ಡೌನ್, ರಸ್ತೆ ಇಲ್ಲ: ಸಚಿವ ಆರ್ ಅಶೋಕ್

ಇನ್ಮುಂದೆ ಕೊರೋನಾ ಸೋಂಕಿತರ ಮನೆಯಷ್ಟೇ ಸೀಲ್ ಡೌನ್, ರಸ್ತೆ ಇಲ್ಲ: ಸಚಿವ ಆರ್ ಅಶೋಕ್

- Advertisement -
- Advertisement -

ಬೆಂಗಳೂರು: ಇದುವರೆಗೆ ಕೊರೋನಾ ಸೋಂಕಿನ ಪ್ರಕರಣ ಪತ್ತೆಯಾದಂತ ರಸ್ತೆಯನ್ನು ಸೀಲ್ ಡೌನ್ ಮಾಡುವ ಕ್ರಮವನ್ನು ಕೈಬಿಡಲಾಗುತ್ತಿದ್ದು, ಇನ್ಮುಂದೆ ಕೊರೋನಾ ಸೋಂಕಿನ ಪ್ರಕರಣ ಕಂಡುಬಂದಂತ ಮನೆಗಳನ್ನು ಅಷ್ಟೇ ಸೀಲ್ ಡೌನ್ ಮಾಡಲಾಗುತ್ತದೆ ಎಂದು ಕಂದಾಯ ಸಚಿವ ಆರ್ ಅಶೋಕ್ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಆರ್ ಅಶೋಕ್, ಇದುವರೆಗೆ ಕೊರೋನಾ ಪ್ರಕರಣ ಪತ್ತೆಯಾದಂತ ಏರಿಯಾ, ರಸ್ತೆಯನ್ನು ಸಂಪೂರ್ಣವಾಗಿ ಸೀಲ್ ಡೌನ್ ಮಾಡಲಾಗುತ್ತಿತ್ತು. ಆದ್ರೇ ಇನ್ಮುಂದೆ ಕೊರೋನಾ ಪ್ರಕರಣ ಪತ್ತೆಯಾದಂತ ಮನೆಯನ್ನಷ್ಟೇ ಸೀಲ್ ಡೌನ್ ಮಾಡಲಾಗುತ್ತದೆ. ಪ್ರಕರಣ ಪತ್ತೆಯಾದಂತ ರಸ್ತೆಯನ್ನು ಸೀಲ್ ಡೌನ್ ಮಾಡುವ ಕ್ರಮವನ್ನು ಕೈಬಿಡಲಾಗುತ್ತಿದೆ ಎಂದರು.

- Advertisement -

Latest News

error: Content is protected !!