Wednesday, August 19, 2026
Homeತಾಜಾ ಸುದ್ದಿಕೊರೋನಾದಿಂದಾಗಿ ಆಸ್ಪತ್ರೆ ಸೇರಿದ್ದ ಗಂಡನಿಗೆ ಹೆಂಡತಿಯಿಂದಲೇ ಸಾರಾಯಿ ಸಪ್ಲೈ!

ಕೊರೋನಾದಿಂದಾಗಿ ಆಸ್ಪತ್ರೆ ಸೇರಿದ್ದ ಗಂಡನಿಗೆ ಹೆಂಡತಿಯಿಂದಲೇ ಸಾರಾಯಿ ಸಪ್ಲೈ!

- Advertisement -
- Advertisement -

ಚೆನ್ನೈ: ಕೊರೋನಾ ಸೋಂಕು ಪೀಡಿತನಾಗಿ ಆಸ್ಪತ್ರೆಗೆ ದಾಖಲಾಗಿರುವ ಗಂಡನಿಗೆ ಹೆಂಡತಿಯೇ ಸಾರಾಯಿ ಪೂರೈಕೆ ಮಾಡಿ ಅವಾಂತರ ಸೃಷ್ಟಿಸಿರುವ ಘಟನೆ ತಮಿಳುನಾಡಿನ ಕಡಲೂರಿನ ರಾಜಾ ಮುತ್ತಯ್ಯ ವೈದ್ಯಕೀಯ ಕಾಲೇಜಿನಲ್ಲಿ ನಡೆದಿದೆ.

ಕುಡಿದ ಮತ್ತಿನಲ್ಲಿ ಪತಿ ಆಸ್ಪತ್ರೆಯಲ್ಲಿ ಗಲಾಟೆ ನಡೆಸಿದ್ದರಿಂದ ಮದ್ಯದ ವಿಚಾರ ಇದೀಗ ಬೆಳಕಿಗೆ ಬಂದಿದೆ.

ಟಿ. ಮುತ್ತು ಕುಮಾರ್ (48) ಎಂಬಾತ ವಾರದ ಹಿಂದೆ ಕೋವಿಡ್ ಸೋಂಕು ದೃಢವಾಗಿ ಆಸ್ಪತ್ರೆ ಸೇರಿದ್ದರು. ಆತನ ಪತ್ನಿ ಎಂ. ಕಲೈಮಂಗೈ ಆಸ್ಪತ್ರೆಗೆ ಊಟದ ಬ್ಯಾಗ್ ತಂದು ಕೊಟ್ಟಿದ್ದಳು. ಆದರೆ, ಊಟ ಮಾಡಿದ ನಂತರ ಈತ ಮದ್ಯದ ಅಮಲಿನಲ್ಲಿ ಆಸ್ಪತ್ರೆಯಲ್ಲಿ ರಂಪಾಟ ನಡೆಸಿದ್ದಾನೆ.

- Advertisement -

Latest News

error: Content is protected !!