Friday, June 5, 2026
Homeಕರಾವಳಿಉಡುಪಿದ್ವಿತೀಯ ಪಿಯುಸಿಗೆ ದಾಖಲಾತಿ ಮುಗಿಸಿ ಬರುತ್ತಿದ್ದ ವಿದ್ಯಾರ್ಥಿ ಲಾರಿಯಡಿ ಬಿದ್ದು ಸಾವು

ದ್ವಿತೀಯ ಪಿಯುಸಿಗೆ ದಾಖಲಾತಿ ಮುಗಿಸಿ ಬರುತ್ತಿದ್ದ ವಿದ್ಯಾರ್ಥಿ ಲಾರಿಯಡಿ ಬಿದ್ದು ಸಾವು

- Advertisement -
- Advertisement -

ಕುಂದಾಪುರ: ಪ್ರಥಮ ಪಿಯುಸಿ ಮುಗಿಸಿ ದ್ವೀತಿಯ ಪಿಯುಸಿ ತರಗತಿಗೆ ದಾಖಲಾತಿ ಮುಗಿಸಿ ರಸ್ತೆ ದಾಟುತ್ತಿದ್ದ ವಿದ್ಯಾರ್ಥಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ವಿದ್ಯಾರ್ಥಿ ಸ್ಥಳದಲ್ಲಿಯೇ ಮೃತಪಟ್ಟ ಧಾರುಣ ಘಟನೆ ನಾವುಂದದಲ್ಲಿ ನಡೆದಿದೆ.

ಕಿಶನ್ ಖಾರ್ವಿ

ಮರವಂತೆ ನಿವಾಸಿ ಕಿಶನ್ ಖಾರ್ವಿ (17) ಮೃತ ಪಟ್ಟ ದುರ್ದೈವಿ.

ಸ್ಥಳಕ್ಕೆ ಬೈಂದೂರು ಪೊಲೀಸ್ ವೃತ್ತ ನಿರೀಕ್ಷಕ ಸುರೇಶ ನಾಯಕ್, ಪಿಎಸ್ಐ ಸಂಗೀತಾ ಭೇಟಿ ನೀಡಿದ್ದಾರೆ. ಗಂಗೊಳ್ಳಿ ಆಪತ್ಬಾಂದವ ಅಂಬುಲೆನ್ಸ್ ಮೂಲಕ ಶವವನ್ನು ಬೈಂದೂರು ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಲಾಗಿದೆ. ಬೈಂದೂರು ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!