Thursday, July 16, 2026
Homeತಾಜಾ ಸುದ್ದಿಹುಬ್ಬಳ್ಳಿ: ಚಲಿಸುವ ರೈಲಿಗೆ ಸಿಲುಕಿದ ವ್ಯಕ್ತಿಯ ಎರಡೂ ಕಾಲು ಕಟ್

ಹುಬ್ಬಳ್ಳಿ: ಚಲಿಸುವ ರೈಲಿಗೆ ಸಿಲುಕಿದ ವ್ಯಕ್ತಿಯ ಎರಡೂ ಕಾಲು ಕಟ್

- Advertisement -
- Advertisement -

ಹುಬಳ್ಳಿ: ಚಲಿಸುತ್ತಿದ್ದ ರೈಲಿಗೆ ವ್ಯಕ್ತಿಯೋರ್ವನ ಕಾಲು ಸಿಲುಕಿ ಎರಡೂ ಕಾಲುಗಳು ಕಟ್ ಆಗಿರುವ ಘಟನೆ ನಗರದ ಕಿಮ್ಸ್ ಹಿಂಭಾಗದ ಪ್ರವೇಶ ದ್ವಾರದ ರೈಲ್ವೆ ಮಾರ್ಗದಲ್ಲಿ ನಡೆದಿದೆ.


ಶಾಲಿಮಾರ್-ವಾಸ್ಕೋಡಿಗಾಮಾ ರೈಲಿಗೆ ಹುಬ್ಬಳ್ಳಿಯ ಹೆಗ್ಗೇರಿಯ ವ್ಯಕ್ತಿಯೋರ್ವ ಸಿಲುಕಿದ್ದು, ಆತನ ಕಾಲುಗಳ ಕಟ್ ಆಗಿವೆ. ರೈಲು ಚಲಿಸುತ್ತಿದ್ದಾಗ ಹಳಿ ಮೇಲೆ ವ್ಯಕ್ತಿ ನಿಂತಿರುವುದನ್ನುಸಿಬ್ಬಂದಿ ಗಮನಿಸಿ ಹಾರ್ನ್ ಮಾಡಿದ್ದಾರೆ.


ಆದರೆ ವ್ಯಕ್ತಿ ಹಳಿಯ ಮೇಲಿಂದ ಆಚೆ ಸರಿಯದೇ ಅಲ್ಲೇ ನಿಂತಿದ್ದಾನೆ. ಕೂಡಲೇ ಎಚ್ಚೆತ್ತುಕೊಂಡ ರೈಲ್ವೆ ಸಿಬ್ಬಂದಿ ರೈಲನ್ನು ನಿಲ್ಲಿಸಿದ್ದಾರೆ.ಎಂಜಿನ್ ಸೇರಿ ಮೂರ್ನಾಲ್ಕು ಬೋಗಿಗಳು ಕಾಲ ಮೇಲೆ ಹರಿದ ಕಾರಣ ಒಂದು ಕಾಲು ಸಂಪೂರ್ಣ ತುಂಡಾಗಿ ಹೋಗಿದ್ದು, ಇನ್ನೊಂದು ಕಾಲು ಅರ್ಧ ತುಂಡಾಗಿ ಸಾವು ಬದುಕಿನ ಹೋರಾಟ ನಡೆಸಿದ್ದಾನೆ. ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

- Advertisement -

Latest News

error: Content is protected !!