Monday, May 6, 2024
Homeತಾಜಾ ಸುದ್ದಿನಟಿ ಮೇಘನಾ ರಾಜ್ ಆಸ್ಪತ್ರೆಗೆ ದಾಖಲು

ನಟಿ ಮೇಘನಾ ರಾಜ್ ಆಸ್ಪತ್ರೆಗೆ ದಾಖಲು

spot_img
- Advertisement -
- Advertisement -

ಬೆಂಗಳೂರು: ದಿವಂಗತ ನಟ ಚಿರಂಜೀವಿ ಸರ್ಜಾ ಪತ್ನಿ, ನಟಿ ಮೇಘನಾ ರಾಜ್​ ಇಂದು ಬೆಳಗ್ಗೆ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಒಂಬತ್ತು ತಿಂಗಳ ತುಂಬು ಗರ್ಭಿಣಿ ಆಗಿರುವ ಮೇಘನಾರ ಹರಿಗೆ ದಿನಾಂಕ ಹತ್ತಿರ ಬಂದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ ಎನ್ನಲಾಗಿದೆ. ತಂದೆ ಸುಂದರ್​ ರಾಜ್​ ಮತ್ತು ತಾಯಿ ಪ್ರಮಿಳಾ ಜೋಶಿ ಬೆಂಗಳೂರಿನ  ಕೆ ಆರ್ ರಸ್ತೆಯಲ್ಲಿ ಇರುವ ಅಕ್ಷ ಆಸ್ಪತ್ರೆಗೆ ಕರೆ ತಂದಿದ್ದಾರೆ.

ಇನ್ನು ಮೇಘನಾ ರಾಜ್ ಆಸ್ಪತ್ರೆಗೆ ಭೇಟಿ ನೀಡಿದ ಬೆನ್ನಲ್ಲೇ ನಟ ಧ್ರುವ ಸರ್ಜಾ, ಪತ್ನಿ ಪ್ರೇರಣಾ ಜತೆ ಆಸ್ಪತ್ರೆಗೆ ಆಗಮಿಸಿದ್ದಾರೆ. ಹಾಗಾಗಿ ಇಂದು ಅಥವಾ ನಾಳೆ ಹೆರಿಗೆ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಇನ್ನು ಚಿರಂಜೀವಿ ಸರ್ಜಾ ಅವರ ಬರ್ತಡೇ ದಿನವೇ ಮೇಘನಾ ಮಗುವಿಗೆ ಜನ್ಮ ನೀಡ್ತಾರೆ ಅಂತಾ ಹೇಳಲಾಗಿತ್ತು.

ಈ ಬಗ್ಗೆ ಸ್ಪಷ್ಟನೆ ನೀಡಿದ ಮೇಘನಾ ಚಿರು ಯಾವಾಗ ಬರ್ಬೇಕು ಅಂತಾ ಅವರಿಗೆ ಅನ್ಸುತ್ತೆ ಅವತ್ತೇ ಬರಲಿ ಎಂದಿದ್ದರು. ಇದೀಗ ಆಸ್ಪತ್ರೆಗೆ ದಾಖಲಾಗಿರೋದು ನೋಡಿದ್ರೆ ಹೆರಿಗೆ ಅಂತಾ ಹೇಳಲಾಗುತ್ತಿದೆ.

- Advertisement -
spot_img

Latest News

error: Content is protected !!