Sunday, May 19, 2024
Homeತಾಜಾ ಸುದ್ದಿಜಸ್ಟ್ ಒಂದು ವಿಡಿಯೋ ಪ್ರಸಿದ್ಧ ಬಟ್ಟೆ ಅಂಗಡಿಯನ್ನೇ ಮುಚ್ಚಿಸಿ ಬಿಡ್ತು...

ಜಸ್ಟ್ ಒಂದು ವಿಡಿಯೋ ಪ್ರಸಿದ್ಧ ಬಟ್ಟೆ ಅಂಗಡಿಯನ್ನೇ ಮುಚ್ಚಿಸಿ ಬಿಡ್ತು…

spot_img
- Advertisement -
- Advertisement -

ಚೆನ್ನೈಃ ಕೊರೊನಾದಿಂದಾಗಿ ದೇಶದಲ್ಲಿ ಜನ ಹೇಗೆಲ್ಲಾ ಒದ್ದಾಡುತ್ತಿದ್ದಾರೆ ಅನ್ನೋದು ನಿಮಗೆಲ್ಲಾ ಗೊತ್ತೇ ಇದೆ. ಇದೆಲ್ಲದರ ಅರಿವಿದ್ರೂ ಚೆನ್ನೈನ ಖ್ಯಾತ ಬಟ್ಟೆ ಮಳಿಗೆ ಕುಮಾರನ್ ಸಿಲ್ಕ್ಸ್ ಡಿಸ್ಕೌಂಟ್ ಸೇಲ್ ಮಾಡಿ ಲಾಭ ಮಾಡ್ಕೊಳ್ಳೋಣ ಅಂತಾ ಹೋಗಿ ಇದೀಗ ಬಾಗಿಲು ಮುಚ್ಚಿಸಿಕೊಂಡಿದೆ. ಅದಕ್ಕೆ ಕಾರಣವಾಗಿದ್ದು ಮಹಿಳೆಯೊಬ್ಬರು ಶೇರ್ ಮಾಡಿಕೊಂಡ ವಿಡಿಯೋ..

ಹೌದು.. ಚೆನ್ನೈನ ಕುಮಾರನ್ ಸಿಲ್ಕ್ ಬಟ್ಟೆ ಅಂಗಡಿಯನ್ನೇ, ಚೆನ್ನೈನ ಕಾರ್ಪೋರೇಷನ್ ಅಧಿಕಾರಿಗಳು ಇದೀಗ ಸೀಲ್ ಮಾಡಿದ್ದಾರೆ. ಇದಕ್ಕೆ ಕಾರಣವಾಗಿದ್ದು ಬೇರೇನೂ ಅಲ್ಲ, ಅಕ್ಟೋಬರ್ 19ರಂದು ಪ್ರಿಯಾಂಕ್ ಕತಿಮೂರ್ತಿ ಎಂಬುವರು ಚೆನ್ನೈನ ಪ್ರಸಿದ್ಧ ಬಟ್ಟೆ ಕುಮಾರನ್ ಸಿಲ್ಕ್ ಬಟ್ಟೆ ಅಂಗಡಿಯಲ್ಲಿ ಜನಸಂದಣಿ ಇರುವ ಬಗ್ಗೆ ವೀಡಿಯೋ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.

ಕುಮಾರನ್ ಸಿಲ್ಕ್ ಬಟ್ಟೆ ಅಂಗಡಿಯಲ್ಲಿ ಸಾಮಾಜಿಕ ಅಂತರವೂ ಇಲ್ಲ. ಬಟ್ಟೆ ಖರೀದಿಸಲು ನೆರೆದಿರುವಂತ ಜನರು ಮಾಸ್ಕ್ ಕೂಡ ಧರಿಸಿಲ್ಲ. ಕೊರೋನಾ ಸೋಂಕಿನ ಮುಂಜಾಗ್ರತಾ ಕ್ರಮವನ್ನು ಈ ಬಟ್ಟೆ ಅಂಗಡಿ ಗಾಳಿಗೆ ತೂರಿದೆ. ಇದರ ಬಗ್ಗೆ ಸಂಬಂಧಿಸಿದಂತ ಅಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದರು.

ಈ ವೀಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿತ್ತು. ಇದನ್ನು ವೀಕ್ಷಿಸಿದ್ದಂತ ನೆಟ್ಟಿಗರು, ಚೆನ್ನೈ ಕಾರ್ಪೋರೇಷನ್ ಸಿಬ್ಬಂದಿ ವಿರುದ್ಧ ಕಿಡಿ ಕಾರಿದ್ದರು. ಇಂತಹ ಅಂಗಡಿಯ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದರು. ಈ ಹಿನ್ನಲೆಯಲ್ಲಿ ಅಂಗಡಿಗೆ ತೆರಳಿದಂತ ಚೆನ್ನೈ ಕಾರ್ಪೋರೇಷನ್ ಅಧಿಕಾರಿಗಳು, ಕುಮಾರನ್ ಸಿಲ್ಕ್ ಬಟ್ಟೆ ಅಂಗಡಿಯನ್ನು ಕೊರೋನಾ ಸೋಂಕಿನ ಮುಂಜಾಗ್ರತಾ ಕ್ರಮ ಕೈಗೊಳ್ಳದ ಕಾರಣ ಸೀಲ್ ಮಾಡಿದ್ದಾರೆ. ಈ ಮೂಲಕ ಬಹುದೊಡ್ಡ ಬಟ್ಟೆ ಅಂಗಡಿಯನ್ನು ಬಂದ್ ಮಾಡಿಸಿದ್ದಾರೆ.

- Advertisement -
spot_img

Latest News

error: Content is protected !!