Sunday, June 7, 2026
Homeತಾಜಾ ಸುದ್ದಿನವರಾತ್ರಿ ಸ್ಪೆಷಲ್: ವೈರಲ್ ಆಗುತ್ತಿದೆ ಕೊರೊನಾ ಸಂಹಾರಿ‌ ದುರ್ಗೆಯ ಫೋಟೋ!

ನವರಾತ್ರಿ ಸ್ಪೆಷಲ್: ವೈರಲ್ ಆಗುತ್ತಿದೆ ಕೊರೊನಾ ಸಂಹಾರಿ‌ ದುರ್ಗೆಯ ಫೋಟೋ!

- Advertisement -
- Advertisement -

ಕೊಲ್ಕತ್ತಾ: ದುರ್ಗಾಪೂಜೆ ಹಿನ್ನೆಲೆ ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ತಯಾರಾಗಿರುವ ವೈದ್ಯೆರೂಪದ ದುರ್ಗೆಯ ಪ್ರತಿಮೆಗೆ ಸಾಮಾಜಿಕ ಜಾಲತಾಣದಲ್ಲಿ ಜನ ಫಿದಾ ಆಗಿದ್ದಾರೆ.

ಕೊಲ್ಕತ್ತಾದಲ್ಲಿ ನವರಾತ್ರಿ ಪ್ರತಿ ವರ್ಷ ಅದ್ದೂರಿಯಾಗಿ ನಡೆಯುತ್ತಿತ್ತು. ಬೃಹತ್ ದುರ್ಗಾ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಪೂಜಿಸಲಾಗುತ್ತಿತ್ತು. ಮೂರ್ತಿ ಕಲಾವಿದರು ಹಾಗೂ ಆಯೋಜಕರು ಈ ಕಾರ್ಯದಲ್ಲಿ ಕ್ರಿಯಾಶೀಲರಾಗಿ ವಿಶೇಷಗಳನ್ನು ಸೃಷ್ಟಿಸುತ್ತಿದ್ದರು. ಆದರೆ, ಈ ಬಾರಿ ಕೊರೊನಾ ಕಾರಣಕ್ಕೆ ಅದ್ದೂರಿ ನವರಾತ್ರಿ ಉತ್ಸವ ನಿಷೇಧಿಸಲಾಗಿದೆ. ಇದರಿಂದ ಕಲಾವಿದರು ತಮ್ಮ ಕ್ರಿಯಾಶೀಲತೆಗೆ ಪರ್ಯಾಯ ಮಾರ್ಗ ಹುಡುಕುತ್ತಿದ್ದಾರೆ.‌

ಆಂಬುಲೆನ್ಸ್ ಎದುರು ಬಿಳಿಯ ಕೋಟ್ ಹಾಕಿ ಸ್ಟೆತಸ್ಕೋಪ್ ಹಿಡಿದು ನಿಂತಿರುವ 10 ಕೈಗಳ ದುರ್ಗಾ ಮಾತೆಯ ಚಿತ್ರ ಸೃಷ್ಟಿಸಿದ್ದಾರೆ. ಮೂರ್ತಿಯಲ್ಲಿ ವೈದ್ಯರ ಕೋಟ್ ಧರಿಸಿ ಮಹಿಷಾಸುರ ಎಂಬ ರಾಕ್ಷಸನೊಂದಿಗೆ ಹೋರಾಡುವ ವೈದ್ಯನಾಗಿ ಚಿತ್ರಿಸಲಾಗಿದೆ. ಕೈಯಲ್ಲಿ ಸಿರೆಂಜ್ ನೀಡಲಾಗಿದ್ದು, ಅದು ಕೊರೊನಾಸುರನ್ನು ಕೊಲಲ್ಲು ಬಳಸುತ್ತಿದೆ. ಇತ್ತ ಕೊರೊನಾ ವಾರಿಯರ್ಸ್ ಗಳಿಗೆ ಗೌರವ ಸಲ್ಲಿಸಿದಂತಿದೆ.

- Advertisement -

Latest News

error: Content is protected !!