Saturday, July 18, 2026
Homeಮನರಂಜನೆಚಿರು ಮಗುವಿಗೆ ಬೆಳ್ಳಿಯ ತೊಟ್ಟಿಲು ಖರೀದಿಸಿದ ಧ್ರುವ ಸರ್ಜಾ

ಚಿರು ಮಗುವಿಗೆ ಬೆಳ್ಳಿಯ ತೊಟ್ಟಿಲು ಖರೀದಿಸಿದ ಧ್ರುವ ಸರ್ಜಾ

- Advertisement -
- Advertisement -

ಬೆಂಗಳೂರು: ಒಂದು ಕಡೆ ತುಂಬು ಗರ್ಭಿಣಿ ಮೇಘನಾ ರಾಜ್ ಆಸ್ಪತ್ರೆಗೆ ದಾಖಲಾಗಿದ್ದರೆ ಮತ್ತೊಂದು ಕಡೆ ಮಗುವಿಗೆ ಸ್ವಾಗತ ಕೋರೋದಕ್ಕೆ ಸರ್ಜಾ ಫ್ಯಾಮಿಲಿ ಎಲ್ಲಾ ರೀತಿಯಲ್ಲೂ ಸಜ್ಜಾಗುತ್ತಿದೆ.

ಯೆಸ್..ಮಗುವಿನ ಆಗಮನಕ್ಕೆ ಕ್ಷಣಗಣನೆ ಶುರುವಾಗುತ್ತಿದ್ದಂತೆ ಧ್ರುವ ಸರ್ಜಾ ಅವರು ಬೆಳ್ಳಿ ತೊಟ್ಟಿಲು ಖರೀದಿಸಿದ್ದಾರೆ. ಮುದ್ದು ಮಗು ಮನೆಗೆ ಬರುವ ಮುನ್ನವೇ ಪ್ರೀತಿಯ ಅಣ್ಣನ ಮಗುವಿಗೆ ಭರ್ಜರಿ ಸ್ವಾಗತ ಕೋರಲು ಮುಂದಾಗಿರುವ ಧ್ರುವ ಸರ್ಜಾ, ಸುಮಾರು 10 ಲಕ್ಷ ರೂ. ಮೌಲ್ಯದ ಬೆಳ್ಳಿ ತೊಟ್ಟಲು ಖರೀದಿ ಮಾಡಿದ್ದಾರೆ. ನವರತ್ನ ಜ್ಯೂವೆಲರ್ಸ್ ನಲ್ಲಿ ಬೆಳ್ಳಿ ತೊಟ್ಟಿಲು ಖರೀದಿ ಮಾಡಲಾಗಿದ್ದು, ತೊಟ್ಟಿಲು ಜೊತೆಗೆ ಚಿನ್ನದ ಬಟ್ಟಲನ್ನು ಖರೀದಿ ಮಾಡಿದ್ದಾರ.

ಸದ್ಯಕ್ಕೆ ಸರ್ಜಾ ಕುಟುಂಬ ಮಾಡಿಕೊಳ್ಳು್ತಿರುವ ತಯಾರಿ ನೋಡಿದ್ರೆ ಇವತ್ತು ಅಥವಾ ನಾಳೆ ಮೇಘನಾ ರಾಜ್ ಮಗುವಿಗೆ ಜನ್ಮ ನೀಡುವ ಸಾಧ್ಯತೆ ಇದೆ ಅಂತಾ ಹೇಳಲಾಗುತ್ತಿದೆ.

- Advertisement -

Latest News

error: Content is protected !!