Thursday, June 4, 2026
Homeಕರಾವಳಿಪುತ್ತೂರು:ನೆರೆಮನೆಯ ವಿವಾಹಿತ ಮಹಿಳೆಯೊಂದಿಗೆ ಅಕ್ರಮ ಸಂಬಂಧ; ನೆರೆಹೊರೆಯವರಿಗೆ ಗೊತ್ತಾಗಿ ಮರ್ಯಾದೆಗೆ ಅಂಜಿ ವ್ಯಕ್ತಿ ಆತ್ಮಹತ್ಯೆ

ಪುತ್ತೂರು:ನೆರೆಮನೆಯ ವಿವಾಹಿತ ಮಹಿಳೆಯೊಂದಿಗೆ ಅಕ್ರಮ ಸಂಬಂಧ; ನೆರೆಹೊರೆಯವರಿಗೆ ಗೊತ್ತಾಗಿ ಮರ್ಯಾದೆಗೆ ಅಂಜಿ ವ್ಯಕ್ತಿ ಆತ್ಮಹತ್ಯೆ

- Advertisement -
- Advertisement -

ಪುತ್ತೂರು; ನೆರೆಮನೆಯ ವಿವಾಹಿತ ಮಹಿಳೆಯೊಂದಿಗಿದ್ದ ಅಕ್ರಮ ಸಂಬಂಧ ಮನೆಯವರಿಗೆ ಗೊತ್ತಾಗಿ ಮರ್ಯಾದೆಗೆ ಅಂಜಿ ವ್ಯಕ್ತಿಯೊಬ್ಬರು  ಆತ್ಮಹತ್ಯೆಗೆ ಶರಣಾಗಿರುವ ಘಟನೆ ನೆಟ್ಟಣಿಗೆ ಮೂಡ್ನೂರು ಗ್ರಾಮದ ವಜ್ರಮೂಲೆ ಎಂಬಲ್ಲಿ ನಡೆದಿದೆ.ನೆಟ್ಟಣಿಗೆ ಮುಡ್ನೂರು ಗ್ರಾಮದ ವಜ್ರಮೂಲೆ ದಿ. ಕೊರಗರವರ ಪುತ್ರ ಶೀನಪ್ಪ(50)ಆತ್ಮಹತ್ಯೆ ಮಾಡಿಕೊಂಡವರು.

ಶೀನಪ್ಪ ಅವರು ಏ.2ರಂದು ಮಧ್ಯಾಹ್ನ ಮದ್ಯ ಸೇವನೆ ಮಾಡಿ ಮನೆಯಲ್ಲಿ ಸಣ್ಣ ಪುಟ್ಟ ಜಗಳ ಮಾಡಿದ್ದರು.
ಶೀನಪ್ಪ ಪತ್ನಿಗೆ ಹಲ್ಲೆ ಮಾಡುವುದನ್ನು 3 ಜನ ಮಕ್ಕಳು ಓಡಿಕೊಂಡು ಬಂದು ತಡೆದಿದ್ದಾರೆ. ಬಳಿಕ ಅವರು ಕೋಪಗೊಂಡು ಬೈಕ್ ಹತ್ತಿ ಪೇಟೆಗೆ ಹೋಗಿದ್ದರು.

ನಂತರ ಶೀನಪ್ಪ ಅವರು ಮೋಟಾರು ಸೈಕಲ್‌ ಮನೆಯ ಬಳಿ ನಿಲ್ಲಿಸಿ ರಾತ್ರಿ 8.30ಕ್ಕೆ ಹೋಗಿದ್ದಾರೆ. ಬಳಿಕ ತೋಟದ ಪಕ್ಕದಲ್ಲಿರುವ ಮಾವಿನ ಮರದ ಬಳಿ ಹೋಗಿ ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡುಬಂದಿದೆ ಎಂದು ದೂರಿನಲ್ಲಿ ಮೃತರ ಪತ್ನಿ ಹೇಳಿದ್ದಾರೆ.

ಗಂಡ ಹಾಗೂ ನೆರೆ ಮನೆಯ ಮಹಿಳೆಯ ನೆರೆಹೊರೆಯವರಿಗೆ ಗೊತ್ತಾಗಿ ಮರ್ಯಾದೆಗೆ ಹೆದರಿ ಅವರು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಮೃತ ಶೀನಪ್ಪ ಅವರ ಪತ್ನಿ ಸಂಪ್ಯ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

- Advertisement -

Latest News

error: Content is protected !!