Saturday, April 27, 2024
Homeತಾಜಾ ಸುದ್ದಿಮದುಮಗನಿಗೆ 2ರ ಮಗ್ಗಿ ಗೊತ್ತಿಲ್ಲ ಎಂದು ಮದುವೆ ಕ್ಯಾನ್ಸಲ್ ಮಾಡಿದ ವಧು!

ಮದುಮಗನಿಗೆ 2ರ ಮಗ್ಗಿ ಗೊತ್ತಿಲ್ಲ ಎಂದು ಮದುವೆ ಕ್ಯಾನ್ಸಲ್ ಮಾಡಿದ ವಧು!

spot_img
- Advertisement -
- Advertisement -

ಮಹೋಬಾ: ಮದುವೆ ಮನೆಯಲ್ಲಿಯೇ ಊಟ, ವರದಕ್ಷಿಣೆಗಳಂತಹ ಕಾರಣಕ್ಕೆ ಮದುವೆ ಮುರಿದು ಬಿದ್ದ ಪ್ರಸಂಗಗಳನ್ನು ನಾನು ಕೇಳಿದ್ದೇವೆ ಹಾಗೂ ನೋಡಿದ್ದೇವೆ. ಆದರೆ, ಇಲ್ಲೊಂದು ಮದುವೆ ವಿಚಿತ್ರ ಕಾರಣಕ್ಕೆ ಮುರಿದು ಬಿದ್ದಿರುವ ಘಟನೆ ನಡೆದಿದೆ. ಇಲ್ಲಿ ವರನಿಗೆ 2ರ ಮಗ್ಗಿ ಬರಲಿಲ್ಲ ಎಂಬ ಕಾರಣಕ್ಕೆ ಮದುವೆ ಮುರಿದು ಬಿದ್ದಿದೆ. ಈ ಘಟನೆ ಉತ್ತರ ಪ್ರದೇಶದ ಮಹೋಬಾ ಜಿಲ್ಲೆಯಲ್ಲಿ ನಡೆದಿದೆ.

ಉತ್ತರ ಪ್ರದೇಶದ ಮಹೋಬಾ ಜಿಲ್ಲೆಯ ಧವಾರ್ ಗ್ರಾಮದ ಯುವಕನಿಗೆ ಬೇರೊಂದು ಗ್ರಾಮದ ಯುವತಿಯೊಂದಿಗೆ ಮದುವೆ ನಿಶ್ಚಯವಾಗಿತ್ತು. ಮದುವೆ ದಿನದಂದು ಯುವತಿ ಮತ್ತು ಯುವನ ಕುಟುಂಬ ಮದುವೆ ಮಂಟಪಕ್ಕೆ ಬಂದು ತಲುಪಿದೆ. ಇನ್ನೇನು ಮದುವೆಯಾಗಿಬಿಡುತ್ತದೆ, ವರ ವಧುವಿನ ಕೊರಳಿಗೆ ಹಾರ ಹಾಕುತ್ತಾನೆ ಎನ್ನುಷ್ಟರಲ್ಲಿ ವಧು, ವರನಿಗೆ ಒಂದು ಸವಾಲು ಹಾಕಿದ್ದಾಳೆ. 2ರ ಮಗ್ಗಿ ಹೇಳಿ, ನನ್ನ ಕೊರಳಿಗೆ ಹಾರ ಹಾಕು ಎಂದಿದ್ದಾಳೆ.

ವರ 2ರ ಮಗ್ಗಿ ಹೇಳುವಲ್ಲಿ ವಿಫಲವಾಗಿದ್ದಾನೆ. ಗಣಿತದ ಬೇಸಿಕ್ ಅಂಶಗಳನ್ನು ಕೂಡ ತಿಳಿದಿಲ್ಲದ ವ್ಯಕ್ತಿಯನ್ನು ನಾನು ಮದುವೆಯಾಗಲು ಸಾಧ್ಯವಿಲ್ಲ ಎಂದು ಆಕೆ ಆಕ್ರೋಶ ಹೊರ ಹಾಕಿದ್ದಾಳೆ. ಯುವತಿಯ ಬಳಿ ವರನ ಕುಟುಂಬ ಆತ ವಿದ್ಯಾವಂತನೆಂದು ಸುಳ್ಳು ಹೇಳಿತ್ತಂತೆ. ಈ ವಿಚಾರವಾಗಿ ಅನುಮಾನ ಬಂದ ಹಿನ್ನೆಲೆಯಲ್ಲಿ ಯುವತಿ ಈ ರೀತಿ ಮಾಡಿ ನಿಜಾಂಶವನ್ನು ಹೊರತೆಗೆದಿದ್ದಾಳೆ.

ಎರಡೂ ಕಡೆಯವರು ಉಡುಗೊರೆ ಮತ್ತು ಆಭರಣಗಳನ್ನು ಪರಸ್ಪರ ಮರಳಿ ನೀಡುವಂತೆ ಪೊಲೀಸರು ಒಪ್ಪಂದ ಮಾಡಿಸಿದ್ದಾರೆ ಎಂದು ತಿಳಿದು ಬಂದಿದೆ.

- Advertisement -
spot_img

Latest News

error: Content is protected !!