Friday, April 26, 2024
Homeಇತರನಿದ್ರೆಗೂ ಒಂದು ದಿನ ಬಂತು: ಇಂದು ವಿಶ್ವ ನಿದ್ರಾ ದಿನ.. ಬನ್ನಿ ನಿದ್ರೆ ಮಾಡೋಣ!

ನಿದ್ರೆಗೂ ಒಂದು ದಿನ ಬಂತು: ಇಂದು ವಿಶ್ವ ನಿದ್ರಾ ದಿನ.. ಬನ್ನಿ ನಿದ್ರೆ ಮಾಡೋಣ!

spot_img
- Advertisement -
- Advertisement -

ಸ್ಪೆಷಲ್ ಡೆಸ್ಕ್: ಗೊತ್ತಿರಲಿ. ನಿದ್ರೆಗೂ ಒಂದು ದಿನವಿದೆ. ನಿದ್ರೆ ಮನುಷ್ಯನ ಜೀವನದಲ್ಲಿ ಎಷ್ಟು ಪ್ರಾಮುಖ್ಯತೆ ಇದೆ ಎಂಬುದನ್ನು ಸಾರುವ ನಿಟ್ಟಿನಲ್ಲಿ ಪ್ರತೀವರ್ಷ ವಿಶ್ವ ನಿದ್ರಾ ದಿನವನ್ನು ಆಚರಿಸಲಾಗುತ್ತಿದೆ. ಆರೋಗ್ಯ ಕಾಪಾಡುವಲ್ಲಿ ಸುಖ ನಿದ್ರೆ ಬಹಳ ಮುಖ್ಯ. ಸಾಕಷ್ಟು ಕಾಯಿಲೆಗಳಿಗೆ ಸುಖ ನಿದ್ರೆಯೇ ರಾಮಬಾಣ. ಆರೋಗ್ಯವಂತ ಪುರುಷನಿಗೆ ದಿನಕ್ಕೆ 7 ಗಂಟೆ ನಿದ್ರೆ ಬೇಕು ಎನ್ನುತ್ತಾರೆ ತಜ್ಞರು. ಇನ್ನು ನಿದ್ರೆ ಕಡಿಮೆಯಾದರೆ ಹೃದಯ ಕಾಯಿಲೆ, ಡಯಾಬಿಟೀಸ್, ಬೊಜ್ಜು, ಕ್ಯಾನ್ಸರ್, ಹಲವು ರೀತಿಯ ಮಾನಸಿಕ ಕಾಯಿಲೆಗಳು ವಕ್ಕರಿಸಿಕೊಳ್ಳುತ್ತವೆ ಎಂದು ಹೇಳುತ್ತಾರೆ ಆರೋಗ್ಯ ತಜ್ಷರು.

ಅತಿಯಾಗಿ ನಿದ್ರೆ ಮಾಡುವುದು ಮತ್ತು ನಿದ್ರೆಗೆಡುವುದು ಎರಡೂ ಅಪಾಯಕಾರಿ ಎಂಬ ಎಚ್ಚರಿಕೆಯನ್ನು ತಜ್ಞರು ನೀಡುತ್ತಾರೆ. ಅತಿಯಾದ ನಿದ್ರೆ/ನಿದ್ರೆಗೆಡುವುದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ತೀರ ಕಮ್ಮಿ ಅವಧಿಯಲ್ಲಿ ನಿದ್ರೆ ಮಾಡುವುದರಿಂದ ಅದು ನಿಮ್ಮ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ಪ್ರಭಾವ ಬೀರುತ್ತದೆ. ವಿಶೇಷವಾಗಿ ಸ್ಥೂಲಕಾಯ ಸಮಸ್ಯೆ ಕಾಣಿಸಿಕೊಳ್ಳಬಹುದು ಎಂದು ಅಧ್ಯಯನವೊಂದು ಎಚ್ಚರಿಸಿದೆ. ಕಡಿಮೆ ಅವಧಿ ನಿದ್ರೆ ಮಾಡುವವರನ್ನು ಸಮರ್ಪಕ ನಿದ್ರೆಚಕ್ರವನ್ನು ಅನುಸರಿಸುವವರಿಗೆ ಹೋಲಿಸಿದರೆ ಅವರ ತೂಕ ಹೆಚ್ಚಿರುತ್ತದೆ ಎನ್ನಲಾಗಿದೆ. ಈ ನಿದ್ರಾಹೀನತೆ ಕೇಲವ ಸ್ಥೂಲಕಾಯ ಸಮಸ್ಯೆಯನ್ನು ಹೊಂದಿರುವುದಿಲ್ಲ. ಅದರ ಜತೆ ಮಧುಮೇಹ ಹಾಗೂ ಮಾನಸಿಕ ಸಮಸ್ಯೆಗಳೊಂದಿಗೆ ಸೇರಿಕೊಂಡಿರುತ್ತದೆ.

ಉತ್ತಮ ಆರೋಗ್ಯಕರ ನಿದ್ರೆಗೆ 10 ಸಲಹೆಗಳು.

  1. ನಿದ್ರಿಸಲು ಮತ್ತು ಎಚ್ಚರಗೊಳ್ಳಲು ಸಮಯವನ್ನು ನಿಗದಿಪಡಿಸಿಕೊಳ್ಳಿ.
  2. ಹಗಲಿನಲ್ಲಿ ನಿದ್ರೆ 45 ನಿಮಿಷ ಮೀರಬಾರದು.
  3. ಮಲಗುವ ಸಮಯಕ್ಕೆ 4 ಗಂಟೆಗಳ ಮೊದಲು ಅತಿಯಾದ ಆಲ್ಕೊಹಾಲ್ ಸೇವನೆಯನ್ನು ತಪ್ಪಿಸಿ ಮತ್ತು ಧೂಮಪಾನ ಮಾಡಬೇಡಿ.
  4. ಮಲಗುವ ಸಮಯಕ್ಕೆ 6 ಗಂಟೆಗಳ ಮೊದಲು ಕೆಫೀನ್ ಸೇವಿಸಬೇಡಿ.
  5. ಮಲಗುವ ಸಮಯಕ್ಕೆ 4 ಗಂಟೆಗಳ ಮೊದಲು ಹೆಚ್ಚು, ಮಸಾಲೆಯುಕ್ತ ಅಥವಾ ಸಕ್ಕರೆ ಆಹಾರವನ್ನು ತೆಗೆದುಕೊಳ್ಳಬೇಡಿ. ಮಲಗುವ ಮುನ್ನ ಲಘು ತಿಂಡಿ ಮಾಡುವುದು ಸ್ವೀಕಾರಾರ್ಹ.
  6. ನಿಯಮಿತವಾಗಿ ವ್ಯಾಯಾಮ ಮಾಡಿ, ಆದರೆ ಮಲಗುವ ಮುನ್ನ ಬೇಡ.
  7. ಆರಾಮದಾಯಕವಾದ ಹಾಸಿಗೆ ಬಳಸಿ.
  8. ಮಲಗಲು ಆರಾಮದಾಯಕವಾದ ತಾಪಮಾನದ ಇರುವಂತೆ ಕೋಣೆಯನ್ನು ಸರಿಯಾಗಿ ಶುದ್ಧ ಗಾಳಿ ಬರುವಂತೆ ವ್ಯವಸ್ಥೆ ಮಾಡಿಕೊಳ್ಳಿ.
  9. ನಿದ್ರೆಗೆ ಹೋಗುವ ಮೊದಲು ಹೆಚ್ಚು ಶಬ್ದದಿಂದ ದೂರವಿರಿ.
  10. ಮಲಗುವ ಕೋಣೆಯಲ್ಲಿ ಸಾಧ್ಯವಾದಷ್ಟು ಹೆಚ್ಚಿನ ಬೆಳಕು ಇರದಂತೆ ನೋಡಿಕೊಳ್ಳಿ.
  11. ಬೆಡ್ ಟೈಮಿಗೆ ಒಂದು ಗಂಟೆ ಮೊದಲು ಮೊಬೈಲ್, ಲ್ಯಾಪ್ ಟಾಪ್, ಟೀವಿ ಎಲ್ಲಾ ಬಂದ್ ಆಗಬೇಕು.
  • ಸವಿನಿದ್ದೆ ತರುವ ಆಹಾರಗಳು ಇಲ್ಲವೆ ನೋಡಿ:
  • 1. ವಾಲ್‌ನಟ್ಸ್, 2. ಬಾದಾಮಿ, 3. ಚೆರ್ರಿ, 4. ಚಮೊಮೈಲ್‌ ಟೀ, 5. ಕಿವಿ ಹಣ್ಣು, 6. ಅನ್ನ, 7. ಕಾಟೇಜ್ ಚೀಸ್‌, 8. ಬಾಳೆಹಣ್ಣು, 9. ಹಾಲು.
  • ರಾತ್ರಿಯಲ್ಲಿ ಸೇವಿಸಬಾರದ ಆಹಾರಗಳು ಇಲ್ಲಿವೆ ನೋಡಿ:
    -1. ಕಾಫಿ/ಟೀ, 2. ಅಧಿಕ ಖಾರವಿರುವ ಆಹಾರ, 3. ಮದ್ಯ, 4. ಅಧಿಕ ನೀರಿನಂಶವಿರುವ ಆಹಾರ, 6. ಸ್ಯಾಚುರೇಟಡ್‌ ಆಹಾರ, 7. ಅತ್ಯಧಿಕ ಪ್ರೊಟೀನ್‌ ಇರುವ ಆಹಾರ

- Advertisement -
spot_img

Latest News

error: Content is protected !!