Thursday, June 4, 2026
Homeಕರಾವಳಿಕಾಸರಗೋಡುಮಂಜೇಶ್ವರ ಉಪಜಿಲ್ಲಾ ಶಾಲಾ ವಿಜ್ಞಾನ ಮೇಳದ ಪೆಂಡಾಲ್‌ ಕುಸಿದ ಪ್ರಕರಣ: ಆರು ಮಂದಿ ಬಂಧನ

ಮಂಜೇಶ್ವರ ಉಪಜಿಲ್ಲಾ ಶಾಲಾ ವಿಜ್ಞಾನ ಮೇಳದ ಪೆಂಡಾಲ್‌ ಕುಸಿದ ಪ್ರಕರಣ: ಆರು ಮಂದಿ ಬಂಧನ

- Advertisement -
- Advertisement -

ಉಪ್ಪಳ: ಮಂಜೇಶ್ವರ ಉಪಜಿಲ್ಲಾ ಶಾಲಾ ವಿಜ್ಞಾನ ಮೇಳ ಬೇಕೂರು ಸರಕಾರಿ ಶಾಲೆಯಲ್ಲಿ ನಡೆಯುತ್ತಿದ್ದ ಸಂದರ್ಭ ವೇದಿಕೆಯ ಮುಂಭಾಗ ಹಾಕಲಾಗಿದ್ದ ಪೆಂಡಾಲ್ ಆಕಸ್ಮಿಕವಾಗಿ ಕುಸಿದು ಮಕ್ಕಳ ಮೇಲೆ ಬಿದ್ದು, ಹಲವು ವಿದ್ಯಾರ್ಥಿಗಳಿಗೆ ಗಾಯವಾಗಿತ್ತು. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರು ಮಂದಿಯನ್ನು ಮಂಜೇಶ್ವರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಚಪ್ಪರದ ಗುತ್ತಿಗೆದಾರ ಗೋಕುಲ್ ದಾಸ್, ಅಹ್ಮದಾಲಿ ಎ.ಪಿ, ಅಬ್ದುಲ್ ಬಶೀರ್, ಅಬ್ದುಲ್ ಶಾಮಿಲ್, ಇಲ್ಯಾಸ್ ಮುಹಮ್ಮದ್ ಮತ್ತು ಅಶ್ರಫ್ ಬಂಧಿತರು ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ಕೇರಳ ಶಿಕ್ಷಣ ಸಚಿವ ಶಿವನ್ ಕುಟ್ಟಿ ಆದೇಶ ನೀಡಿದ್ದಾರೆ.

- Advertisement -

Latest News

error: Content is protected !!