Saturday, June 6, 2026
Homeತಾಜಾ ಸುದ್ದಿ'ಕಾಂತಾರ' ಸಿನಿಮಾದ ಮೂಡ್‌ನಿಂದ ಇನ್ನೂ ಹೊರಬರಲು ಸಾಧ್ಯವಾಗಿಲ್ಲ: ಡಾ.ಡಿ.ವೀರೇಂದ್ರ ಹೆಗ್ಗಡೆ

‘ಕಾಂತಾರ’ ಸಿನಿಮಾದ ಮೂಡ್‌ನಿಂದ ಇನ್ನೂ ಹೊರಬರಲು ಸಾಧ್ಯವಾಗಿಲ್ಲ: ಡಾ.ಡಿ.ವೀರೇಂದ್ರ ಹೆಗ್ಗಡೆ

- Advertisement -
- Advertisement -

ಮಂಗಳೂರು: ಕಾಂತಾರ ಸಿನಿಮಾ ವಿಶ್ವದೆಲ್ಲೆಡೆ ಭಾರೀ‌ ಸದ್ದು‌ ಮಾಡಿದ್ದು ಈ ಸಿನಿಮಾವನ್ನು‌ ನೋಡದವರೇ ಇಲ್ಲದಂತಾಗಿದೆ. ಸಿನಿಮಾ ಅಷ್ಟರ ಮಟ್ಟಿಗೆ ಯಶಸ್ಸು ಗಳಿಸಿದೆ. ಶುಕ್ರವಾರ ರಾತ್ರಿ ಮಂಗಳೂರಿನ ಭಾರತ್ ಸಿನಿಮಾದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ, ರಾಜ್ಯ ಸಭಾ ಸದಸ್ಯ ಡಾ.ಡಿ.ವೀರೇಂದ್ರ ಹೆಗ್ಗಡೆ ಕುಟುಂಬ ಸಮೇತರಾಗಿ ಕಾಂತಾರ ಸಿನಿಮಾವನ್ನು ವೀಕ್ಷಿಸಿದರು. ಸಿನಿಮಾ‌ ವೀಕ್ಷಣೆ ಬಳಿಕ ಚಿತ್ರವನ್ನು ಹಾಗೂ ಚಿತ್ರ ತಂಡವನ್ನು ಹಾಡಿ‌ ಹೊಗಳಿದ್ದು ಎಲ್ಲರಿಗೂ‌ ಅಭಿನಂದನೆ ಸಲ್ಲಿಸಿದ್ದಾರೆ

ನನಗಿನ್ನೂ ಕಾಂತಾರ ಮೂಡ್‌ನಿಂದ ಹೊರಬರೋಕೆ ಸಾಧ್ಯವಾಗಿಲ್ಲ. ಚಿತ್ರದಲ್ಲಿ ದೈವಾರಾಧನೆಯನ್ನು ರಿಷಬ್ ಶೆಟ್ಟಿ ಬಹಳ‌ ಚೆನ್ನಾಗಿ ತೋರಿಸಿದ್ದಾರೆ. ಚಿತ್ರದಲ್ಲಿ ಯುವಕರಿಗೆ ‌ಹೊಸ ಕಥೆ, ಹಳೆಯ ಸ್ಮರಣೆ ಆಗುತ್ತದೆ. ಈ ಚಿತ್ರದಲ್ಲಿ ಹೊಸ ದೃಷ್ಠಿಕೋನವಿದೆ. ದೈವಗಳು ಅಧರ್ಮಕ್ಕೆ ಬೆಂಬಲ ನೀಡುವುದಿಲ್ಲ ಎನ್ನುವುದು ಈ ಸಿನಿಮಾದ ಸಂದೇಶ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆ ತಿಳಿಸಿದರು.

- Advertisement -

Latest News

error: Content is protected !!