Friday, June 5, 2026
Homeಕರಾವಳಿಮೊನ್ನೆ ಹಾಡು ಹಾಡಿ‌ ಸುದ್ದಿಯಾದ ಮಂಗಳೂರು ಪೊಲೀಸ್ ಕಮೀಷನರ್: ಇಂದು ಕ್ರಿಕೆಟ್ ಆಡಿ‌ ಕ್ರೀಡಾ ಸ್ಫೂರ್ತಿ‌...

ಮೊನ್ನೆ ಹಾಡು ಹಾಡಿ‌ ಸುದ್ದಿಯಾದ ಮಂಗಳೂರು ಪೊಲೀಸ್ ಕಮೀಷನರ್: ಇಂದು ಕ್ರಿಕೆಟ್ ಆಡಿ‌ ಕ್ರೀಡಾ ಸ್ಫೂರ್ತಿ‌ ಮೆರೆದ ಶಶಿಕುಮಾರ್

- Advertisement -
- Advertisement -

ಮಂಗಳೂರು: ಮೊನ್ನೆ ಕಾರ್ಯಕ್ರಮವೊಂದರಲ್ಲಿ ಹಾಡು‌ ಹಾಡಿ ಸುದ್ದಿಯಾಗಿದ್ದ ಮಂಗಳೂರು ನಗರದ ನೂತನ ಪೊಲೀಸ್ ಕಮಿಷನರ್ ಶಶಿಕುಮಾರ್​ ಇದೀಗ ತಮ್ಮ ಕ್ರೀಡಾ ಸ್ಫೂರ್ತಿ ಮೂಲಕ ಗಮನ ಸೆಳೆದಿದ್ದಾರೆ. ಯುವಕರೊಂದಿಗೆ ಗಲ್ಲಿ ಕ್ರಿಕೆಟ್ ಆಡುವ ಮೂಲಕ ಗಮನ ಸೆಳೆದಿದ್ದಾರೆ. ಕರ್ತವ್ಯದ ಮಧ್ಯೆಯೇ ಮಂಗಳೂರು ನಗರ ನೂತನ ಪೊಲೀಸ್ ಕಮಿಷನರ್ ಉಳ್ಳಾಲದ ಕೋಡಿಯಲ್ಲಿನ ಗಲ್ಲಿ ಕ್ರಿಕೆಟ್ ಆಡಿ ಕೊಂಚ ರಿಲ್ಯಾಕ್ಸ್ ಆದರು. ಇದೇ ವೇಳೆ ಯುವಕರು ಖುಷ್ ಆದ್ರು.

ಇದೇ ವೇಳೆ ಮಂಗಳೂರಿನ ಉಳ್ಳಾಲದ ಕೋಡಿ, ಮೊಗವೀರಪಟ್ಣ, ಕೋಟೆಪುರ, ಮಾಸ್ತಿಕಟ್ಟೆ, ಉಳ್ಳಾಲಬೈಲ್, ಒಳಪೇಟೆ ಮತ್ತು ತೊಕ್ಕೊಟ್ಟು ಪ್ರದೇಶಗಳಿಗೆ ಭೇಟಿ ನೀಡಿ ಸಾರ್ವಜನಿಕರೊಂದಿಗೆ ಸಂವಾದ ನಡೆಸಿದರು. ಅಲ್ಲದೆ ಅಲ್ಲಿನ ಧಾರ್ಮಿಕ ಕ್ಷೇತ್ರಗಳಾದ ಉಳ್ಳಾಲ ದರ್ಗಾ, ಚಾಮುಂಡೇಶ್ವರಿ ದೇಗುಲಕ್ಕೆ ಭೇಟಿ ನೀಡಿದರು. ಜೊತೆಗೆ ಉಳ್ಳಾಲ ಬೀಚ್ ನಲ್ಲಿ ಮೀನುಗಾರರ ಜೊತೆಗೆ ಮಾತುಕತೆ ನಡೆಸಿದ್ರು.

- Advertisement -

Latest News

error: Content is protected !!