Friday, August 28, 2026
Homeಕರಾವಳಿಮಂಗಳೂರುಮಂಗಳೂರು: ರೈಲಿನಡಿಗೆ ಬಿದ್ದು ವ್ಯಕ್ತಿ ಸಾವು

ಮಂಗಳೂರು: ರೈಲಿನಡಿಗೆ ಬಿದ್ದು ವ್ಯಕ್ತಿ ಸಾವು

- Advertisement -
- Advertisement -

ಮಂಗಳೂರು: ರೈಲಿನಡಿಗೆ ಬಿದ್ದು ವ್ಯಕ್ತಿ ಸಾವನ್ನಪ್ಪಿರುವ ಘಟನೆ ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಹಳೆಯಂಗಡಿ ಸಮೀಪದ ಕೊಪ್ಪಲ ರೈಲ್ವೇ ಗೇಟ್ ಬಳಿ ನಡೆದಿದೆ. ಸಾವನ್ನಪ್ಪಿದ ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ.

ಭಾನುವಾರ ಮಧ್ಯಾಹ್ನ 3 ಗಂಟೆಗೆ ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಹೋಗುತ್ತಿರುವ ರೈಲು ಹಳೆಯಂಗಡಿ ಸಮೀಪದ ಕೊಪ್ಪಲ ರೈಲ್ವೇ ಗೇಟ್ ತಲುಪುತ್ತಿದ್ದಂತೆ ಸುಮಾರು 55 ವರ್ಷ ಪ್ರಾಯದ ವ್ಯಕ್ತಿ ಯೋರ್ವ ರೈಲಿನಡಿಗೆ ಬಿದ್ದಿದ್ದಾನೆ.ಅಪಘಾತದ ನಡೆದ ಬಗ್ಗೆ ರೈಲು ಚಾಲಕನಿಗೆ ಕೂಡಲೇ ತಿಳಿದು ಮಂಗಳೂರಿನಿಂದ ಉಡುಪಿ ಕಡೆಗೆ ಹೋಗುತ್ತಿದ್ದ ಇನ್ನೊಂದು ರೈಲಿನ ಚಾಲಕನಿಗೆ ಮಾಹಿತಿ ನೀಡಿದ್ದು ಅದರ ಚಾಲಕ ರೈಲನ್ನು ಸುಮಾರು ಮುಕ್ಕಾಲು ಗಂಟೆ ಹೊತ್ತು ಅಪಘಾತ ನಡೆದ ಸ್ಥಳದಲ್ಲಿ ನಿಲ್ಲಿಸಿ ರೈಲ್ವೇ ಹಳಿಯ ಮಧ್ಯದಲ್ಲಿ ಛಿದ್ರವಾಗಿದ್ದ ವ್ಯಕ್ತಿಯ ಶವವನ್ನು ಸ್ವತಃ ರೈಲು ಚಾಲಕ ಮತ್ತು ಸ್ಥಳೀಯ ಗ್ಯಾಂಗ್ ಮೆನ್ ರವರು ತೆಗೆದು ರೈಲ್ವೇ ಹಳಿಯ ಬದಿಯಲ್ಲಿ ಇರಿಸಿ ಮಾನವೀಯತೆ ಮೆರೆದಿದ್ದಾರೆ ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ.

ಅಪಘಾತದ ತೀವ್ರತೆಗೆ ಮೃತ ವ್ಯಕ್ತಿಯ ಮುಖ ಜಜ್ಜಿ ಹೋಗಿದ್ದು ದೇಹ ಗುರುತು ಪತ್ತೆಯಾದ ಸ್ಥಿತಿಯಲ್ಲಿದೆ. ಸ್ಥಳಕ್ಕೆ ಮುಲ್ಕಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

- Advertisement -

Latest News

error: Content is protected !!