ಬೆಳ್ತಂಗಡಿ: ಕೆ.ಎಸ್.ಆರ್.ಟಿ.ಸಿ ಬಸ್‌ನ ಬ್ರೇಕ್ ವೈಫಲ್ಯದಿಂದ ಫುಟ್ಪಾತ್ ಮೇಲೆ ಎರಿದ ಘಟನೆ ಮಂಗಳೂರು-ಚಾರ್ಮಾಡಿ ರಾಷ್ಟೀಯ ಹೆದ್ದಾರಿಯ ಬೆಳ್ತಂಗಡಿ ನಗರದ ಹಳೆಕೋಟೆ ಇಂಡಿಯನ್ ಪೆಟ್ರೋಲ್ ಬಂಕ್ ಮುಂಭಾಗದಲ್ಲಿ ಜೂ.22 ರಂದು ಸೋಮವಾರ ಮಧ್ಯಾಹ್ನ ನಡೆದಿದೆ.
ಮಂಗಳೂರು ವಿಭಾಗದ ಈ ಸಾರಿಗೆ ಬಸ್ ಮಂಗಳೂರಿನಿಂದ ಧರ್ಮಸ್ಥಳಕ್ಕೆ ಸಂಚರಿಸುತ್ತಿದ್ದ ನೀಲಿ ಬೋರ್ಡ್ (ಕೆ.ಎ.೧೯ ಎಸ್ ೩೬೦೩) ಸೂಪರ್ ಫಾಸ್ಟ್ ಬಸ್ ಹಳೆಕೋಟೆ ವಾಣಿ ಕಾಲೇಜು ತಲುಪಿದ ಬಳಿಕ ಬ್ರೆಕ್ ವೈಫಲ್ಯದಿಂದ ಹೆದಾರಿಯ ಬಲ ಬದಿವಿರುವ ಫುಟ್ಪಾತ್ ಮೇಲೆರಿದ ರಭಸಕ್ಕೆ ಸುಮಾರು 10 ಮೀಟರ್ ಅಂತರದಲ್ಲಿ ಕಬ್ಬಿಣದ ರೈಲಿಂಗ್ಸ್, ದಾರಿದೀಪ ಕಂಬ ಪುಡಿ ಪುಡಿಯಾಗಿದೆ. ಕಬ್ಬಿಣದ ತುಂಡೊಂದು ಬಸ್‌ನ ಮುಂಭಾಗದಿಂದ ಒಳ ನುಗ್ಗಿ ಚಾಲಕನ ಸ್ಟೇರಿಂಗ್ ಬಳಿಯಿಂದ ಆತನ ಹಿಂಭಾಗದ ಎರಡನೇ ಸೀಟ್‌ನವರೆಗೂ ರಾಡ್ ಒಳನುಗಿದೆ. ಬೆಳಿಗ್ಗೆ ಅಥವಾ ಸಂಜೆ ಬಸ್‌ಗಳಲ್ಲಿ ಹೆಚ್ಚು ಜನಸಂದಣಿ ಹೆಚ್ಚಿದ್ದು ಮಧ್ಯಾಹ್ನ ವೇಳೆ ನಡೆದ ಘಟನೆಯಿಂದ ಬಸ್‌ನಲ್ಲಿ ಪ್ರಯಾಣಿಕರ ಸಂಖ್ಯೆ ತೀರ ಕಡಿಮೆಯಿದ್ದ ಕಾರಣ ಅದೃಷ್ಟವಶಾತ್ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ. ಚಾಲಕನ ಕೆಳಭಾಗದಿಂದ ರಾಡ್ ಬಸ್‌ನೊಳಗೆ ನುಗ್ಗಿದ್ದರೂ ಆತನಿಗೆ ಆಗಲಿ ಪ್ರಯಾಣಿಕರಿಗಾಗಲಿ ಅದೃಷ್ಟವಶಾತ್ ಯಾವುದೇ ಗಾಯಗಳಾಗಿಲ್ಲ. ಘಟನಾ ಸ್ಥಳಕ್ಕೆ ಬೆಳ್ತಂಗಡಿ ಉಪವಿಭಾಗದ ಡಿವೈಎಸ್‌ಪಿ ರೋಹಿಣಿ, ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಕಿಶೋರ್.ಪಿ ಮತ್ತು ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಸಾರಿಗೆ ಬಸ್‌ನಲ್ಲಿ ಟಿಕೆಟ್ ದುಬಾರಿ ಒಂದೆಡೆಯಾದರೆ ಶಕ್ತಿಯೋಜನೆ ಮೂಲಕ ಉಚಿತ ಪ್ರಯಾಣ ಚಾಲ್ತಿಯಲ್ಲಿದೆ . ಆದರೆ ಸಾರಿಗೆ ಇಲಾಖೆ ಬಸ್‌ಗಳ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ಧೋರಣೆ ತೋರುತ್ತಿದೆ. ಬಸ್‌ಗಳ ಟಯರ್ ಸವೆದು ಹೋಗಿ ಅರ್ಧದಲ್ಲಿ ಸಂಚಾರ ನಿಲ್ಲಿಸುವುದು ಮಾಮೂಲಿಯಾಗಿದೆ ಎಂದು ಸಾರ್ವಜನಿಕರು ಆಕ್ರೋಶ ಹೊರ ಹಾಕುತ್ತಿದ್ದಾರೆ.


