Saturday, June 13, 2026
Homeಕರಾವಳಿಮಂಗಳೂರು: ಕಾರು ಡಿಕ್ಕಿಯಾಗಿ ರಸ್ತೆಗೆ ಬಿದ್ದ ಸ್ಕೂಟರ್ ಸವಾರನ ಮೇಲೆ ಹರಿದ ಬಸ್!

ಮಂಗಳೂರು: ಕಾರು ಡಿಕ್ಕಿಯಾಗಿ ರಸ್ತೆಗೆ ಬಿದ್ದ ಸ್ಕೂಟರ್ ಸವಾರನ ಮೇಲೆ ಹರಿದ ಬಸ್!

- Advertisement -
- Advertisement -

ಮಂಗಳೂರು: ಅಪರಿಚಿತ ಮತ್ತು ದ್ವಿಚಕ್ರ ವಾಹನದ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ರಸ್ತೆಗುರುಳಿದ ಸ್ಕೂಟರ್ ಸವಾರ ಬಸ್ಸಿನಡಿಗೆ ಬಿದ್ದು ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಎಕ್ಕೂರು ಬಳಿ ಇಂದು ಬೆಳಗ್ಗೆ ಸಂಭವಿಸಿದೆ.

ಮೃತರನ್ನು ಅತ್ತಾವರ ನಿವಾಸಿ ಧೀಮಂತ್ ರಭೀಂದ್ರ (30) ಎಂದು ಗುರುತಿಸಲಾಗಿದೆ. ಅತ್ತಾವರದ ಲೆನ್ಸ್ ಕಾರ್ಟ್.ಕಾಂ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದ ಇವರು ತೊಕ್ಕೊಟ್ಟುವಿನಲ್ಲಿ ಬಾಡಿಗೆ ಮನೆಯನ್ನು ಹೊಂದಿದ್ದರು. ಅಲ್ಲಿಂದ ಇಂದು ಬೆಳಿಗ್ಗೆ ಇವರು ಸಂಚರಿಸುತ್ತಿದ್ದ ದ್ವಿಚಕ್ರ ವಾಹನಕ್ಕೆ ಕಾರೊಂದು ಢಿಕ್ಕಿ ಹೊಡೆದಿದೆ. ಈ ವೇಳೆ ರಸ್ತೆಗೆ ಎಸೆಯಲ್ಪಟ್ಟ ಧೀಮಂತ್ ಅವರು ಹಿಂದಿನಿಂದ ಬರುತ್ತಿದ್ದ ಬಸ್ಸಿನಡಿಗೆ ಬಿದ್ದು ಗಂಭೀರ ಗಾಯಗೊಂಡಿದ್ದರೆನ್ನಲಾಗಿದೆ.

ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

- Advertisement -

Latest News

error: Content is protected !!