Wednesday, July 15, 2026
Homeತಾಜಾ ಸುದ್ದಿವಿಡಿಯೋ:ಶಿವಮೊಗ್ಗದಲ್ಲಿ ನಡೆಯುತ್ತಿದೆ ಹೀಗೊಂದು ಅಚ್ಚರಿಯ ಘಟನೆ: ದೇವರ ಕಲ್ಲಿಗೆ ಪ್ರತಿದಿನ ಹಾಲು ಸುರಿಸುತ್ತಿದೆ ಹಸು...

ವಿಡಿಯೋ:ಶಿವಮೊಗ್ಗದಲ್ಲಿ ನಡೆಯುತ್ತಿದೆ ಹೀಗೊಂದು ಅಚ್ಚರಿಯ ಘಟನೆ: ದೇವರ ಕಲ್ಲಿಗೆ ಪ್ರತಿದಿನ ಹಾಲು ಸುರಿಸುತ್ತಿದೆ ಹಸು…

- Advertisement -
- Advertisement -

ಶಿವಮೊಗ್ಗ: ಇಲ್ಲಿನ  ಹೊಸನಗರ ತಾಲೂಕು ಕೆಂಚನಾಲ ಗ್ರಾಪಂ ವ್ಯಾಪ್ತಿಯ ಮಾದಾಪುರದ ಪುಂಡಲೀಕ ಶೇಟ್ ಎಂಬುವವರ ಹಸು ಅಚ್ಚರಿಯೊಂದಕ್ಕೆ ಸಾಕ್ಷಿಯಾಗುತ್ತಿದೆ.

ಹೌದು.. ಈ ಹಸು ಮಾಲೀಕನಿಗೆ ಹಾಲು ನೀಡದೆ ಭತ್ತದ ಗದ್ದೆಯಲ್ಲಿರುವ ಲಿಂಗಮುದ್ರೆಯುಳ್ಳ ಕಲ್ಲಿನ ಮೇಲೆ ನಿತ್ಯವೂ ಹಾಲು ಸುರಿಸಿ ಅಚ್ಚರಿ ಮೂಡಿಸಿದೆ. ಕೊಟ್ಟಿಗೆಯಿಂದ ಬಿಟ್ಟ ತಕ್ಷಣ ನೇರವಾಗಿ ಕಲ್ಲಿನತ್ತ ಹೋಗುವ ಹಸು, ಕಲ್ಲನ್ನು ಸುತ್ತುವರಿದು ಕರುವನ್ನು ಸಂತೈಸುವಷ್ಟೇ ಪ್ರೀತಿಯಿಂದ ಕಲ್ಲನ್ನು ಮುದ್ದಿಸುತ್ತದೆ. ಕೆಚ್ಚಲನ್ನು ಕಲ್ಲಿನ ಮೇಲ್ಭಾಗಕ್ಕೆ ತಾಗಿಸಿಕೊಂಡು ನಿಂತುಬಿಡುತ್ತೆ. ಈ ಸಂದರ್ಭದಲ್ಲಿ ಕರುವಿಗೆ ಹಾಲುಣಿಸುವ ಗೋವಿನ ಚಲನವಲನ ಗಮನಿಸಬಹುದು. ಹಾಲಿನ ತೊರೆಯನ್ನು ಇಳಿಸಿಕೊಂಡ ಬಳಿಕ ಮೇಯಲು ತೆರಳುತ್ತೆ.

 ಇದೀಗ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ವಿಡಿಯೋ ನೋಡಿದ ಮಂದಿ ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ.

- Advertisement -

Latest News

error: Content is protected !!