Sunday, June 7, 2026
Homeಕರಾವಳಿಮಂಗಳೂರು: ಮಸೀದಿ ಮೇಲೆ ಸೋಡಾ ಬಾಟಲ್ ಎಸೆದ ದುಷ್ಕರ್ಮಿಗಳು

ಮಂಗಳೂರು: ಮಸೀದಿ ಮೇಲೆ ಸೋಡಾ ಬಾಟಲ್ ಎಸೆದ ದುಷ್ಕರ್ಮಿಗಳು

- Advertisement -
- Advertisement -

ಮಂಗಳೂರು: ಪಾಂಡೇಶ್ವರದ ಅಲ್ಪಸಂಖ್ಯಾತರ ಭವನಕ್ಕೆ ಕಲ್ಲು ತೂರಾಟದ ಘಟನೆ ಮಾಸುವ ಮುನ್ನವೇ ನಗರಕ್ಕೆ ಪ್ರವೇಶ ದ್ವಾರದಂತಿರುವ ರಾ.ಹೆ.66ರ ಬಳಿಯಿರುವ ಪಂಪ್‌ವೆಲ್‌ನ ಮಸೀದಿಗೆ ದುಷ್ಕರ್ಮಿಗಳು ಸೋಡಾ ಬಾಟಲಿ ಎಸೆದ ಘಟನೆ ಇಂದು ಮುಂಜಾನೆ ಬೆಳಕಿಗೆ ಬಂದಿದೆ.

ಇಂದು ಬೆಳಿಗ್ಗೆ ನಗರದ ಪಂಪ್‌ವೆಲ್‌‌ನಲ್ಲಿರುವ ಮಸ್ಜಿದುತ್ತಖ್ವಾ ಮಸೀದಿ ಮೇಲೆ ಬಾಟಲ್ ಎಸೆದು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಮಸೀದಿಯ ಕಾವಲುಗಾರನ ಕಣ್ಣ ತಪ್ಪಿಸಿ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ ಎಂದು ಹೇಳಲಾಗಿದೆ.

ಘಟನಾ ಸ್ಥಳಕ್ಕೆ ಮಂಗಳೂರು ದಕ್ಷಿಣ ಉಪ ವಿಭಾಗ ಎಸಿಪಿ ಕೋದಂಡರಾಮ ಭೇಟಿ ಪರಿಶೀಲನೆ ನಡೆಸುತ್ತಿದ್ದಾರೆ.

- Advertisement -

Latest News

error: Content is protected !!