Saturday, May 4, 2024
Homeಕರಾವಳಿಮಂಗಳೂರುಬೆಳ್ತಂಗಡಿಯಲ್ಲಿ ಅರ್ಥಪೂರ್ಣ ಗಣೇಶೋತ್ಸವ ಆಚರಣೆ, ಸಂಕಷ್ಟದಲ್ಲಿರುವವರಿಗೆ ಸಹಾಯಹಸ್ತ

ಬೆಳ್ತಂಗಡಿಯಲ್ಲಿ ಅರ್ಥಪೂರ್ಣ ಗಣೇಶೋತ್ಸವ ಆಚರಣೆ, ಸಂಕಷ್ಟದಲ್ಲಿರುವವರಿಗೆ ಸಹಾಯಹಸ್ತ

spot_img
- Advertisement -
- Advertisement -

ಬೆಳ್ತಂಗಡಿ: ಸಾರ್ವಜನಿಕ ಗಣೇಶೋತ್ಸವ ಅಂಗವಾಗಿ  ಬೆಳ್ತಂಗಡಿಯ ಶ್ರೀ ಗುರುನಾರಾಯಣ ಸಂಕೀರ್ಣದಲ್ಲಿ 180 ಕುಟಂಬಗಳಿಗೆ ಬೇರೆ ಬೇರೆ ರೀತಿಯ ನೆರವನ್ನು ನೀಡಲಾಯಿತು. ಅಲ್ಲದೇ ಕೊರೊನಾದಿಂದಾಗಿ ಈ ಬಾರಿ ಸಾರ್ವಜನಿಕ ಗಣೇಶೋತ್ಸವ ಆಚರಣೆ ಸಾಧ್ಯವಾಗದೇ ಇರೋದರಿಂದ ಸಾಂಕೇತಿಕ ವಾಗಿ 12 ಕಾಯಿ ಗಣಹೋಮ ನಡೆಸಲಾಯಿತು.

ಗಣಹೋಮದ ಬಳಿಕ ಧ್ವನಿವರ್ಧಕ ಮತ್ತು ಲೈಟಿಂಗ್ಸ್ ಕೆಲಸ ನಿರ್ವಹಿಸುತ್ತಿರುವ 180 ಕುಟುಂಬಗಳಿಗೆ ಆಹಾರ ಸಾಮಾಗ್ರಿಗಳನ್ನು ವಿತರಿಸಲಾಯಿತು. ಜೊತಗೆ ಅನಾರೋಗ್ಯದಿಂದ ಬಳಲುತ್ತಿರುವ ಕುಟುಂಬಕ್ಕೆ ವೈದ್ಯಕೀಯ ನೆರವು ಹಾಗೇ  ಅಂಗವಿಕಲರರಿರುವ 5 ಕುಟುಂಬಗಳಿಗೆ ಗ್ಯಾಸ್ ಸಿಲಿಂಡರ್ ನೀಡಲಾಯಿತು. ಹಾಗೇ  ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗೈದ ವಿದ್ಯಾರ್ಥಿ ಗಳಿಗೆ ಪ್ರೋತ್ಸಾಹ ಧನ ನೀಡುವ ಮೂಲಕ ಅರ್ಥಪೂರ್ಣವಾಗಿ ಗಣೇಶೋತ್ಸವವನ್ನು ಆಚರಿಸಲಾಯ್ತು.

ಈ ವೇಳೆ ಗಣೇಶೋತ್ಸವ ಸಮಿತಿಯ ಅಧ್ಯಕ್ಷ, ವಿಧಾನ ಪರಿಷತ್ ಶಾಸಕ ಕೆ ಹರೀಶ್ ಕುಮಾರ್ ಕಿಟ್ ಗಳನ್ನು ಮತ್ತು ಸಹಾಯಧನವನ್ನು ವಿತರಿಸಿದರು. ಈ ಸಂದರ್ಭದಲ್ಲಿ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಉಪಾಧ್ಯಕ್ಷರಾದ ಸುಭಾಶ್ಚಂದ್ರ ರೈ, ಜಗದೀಶ್, ಕಾರ್ಯದರ್ಶಿಗಳಾದ ಕೆ ಶೈಲೇಶ್ ಕುಮಾರ್, ಕೇಶವ ಗೌಡ ಪಿ, ಯೂತ್ ಕಾಂಗ್ರೆಸ್ ಅಧ್ಯಕ್ಷ ಅಭಿನಂದನ್ ಹರೀಶ್ ಕುಮಾರ್, ಶ್ರೀಮತಿ ನಮಿತಾ ಹರೀಶ್ ಕುಮಾರ್, ಹಾಗೂ ಗಣೇಶೋತ್ಸವ ಸಮಿತಿ ಪದಾಧಿಕಾರಿಗಳು, ಫಲಾನುಭವಿಗಳು ಮೊದಲಾದವರು ಉಪಸ್ಥಿತರಿದ್ದರು.

- Advertisement -
spot_img

Latest News

error: Content is protected !!