Thursday, June 4, 2026
Homeಇತರಲಾಡ್ಜ್ ನಲ್ಲಿ ಅಕ್ರಮವಾಗಿ ಬಂಧಿಸಿಟ್ಟಿದ್ದ ಮಹಿಳೆಯ ರಕ್ಷಣೆ, ಲಾಡ್ಜ್ ನ ಕನ್ನಡಿ ಹಿಂದಿತ್ತು ಭಯಾನಕ ರಹಸ್ಯ

ಲಾಡ್ಜ್ ನಲ್ಲಿ ಅಕ್ರಮವಾಗಿ ಬಂಧಿಸಿಟ್ಟಿದ್ದ ಮಹಿಳೆಯ ರಕ್ಷಣೆ, ಲಾಡ್ಜ್ ನ ಕನ್ನಡಿ ಹಿಂದಿತ್ತು ಭಯಾನಕ ರಹಸ್ಯ

- Advertisement -
- Advertisement -

ತಮಿಳುನಾಡು : ಮಹಿಳೆಯರ ಕಳ್ಳ ಸಾಗಾಣಿಕೆ ಮರೆಯಲ್ಲಿ ನಡೆಯುತ್ತಲೇ ಇವೆ. ಇದೀಗ ಲಾಡ್ಜ್ ಒಂದಕ್ಕೆ ದಾಳಿ ಮಾಡಿದ ಪೊಲೀಸರು ಲಾಡ್ಜ್​ನ ಬಾತ್​ರೂಮ್​ನಲ್ಲಿದ್ದ ಸಣ್ಣ ಕನ್ನಡಿಯನ್ನು ನೂಕಿದಾಗ ಅವರಿಗೊಂದು ಅಚ್ಚರಿಯೇ ಕಾದಿತ್ತು.

ಕನ್ನಡಿಯ ಹಿಂದೆಯೇ ಸಣ್ಣದಾದ ಕೋಣೆಯೊಂದಿತ್ತು. ಅದರಲ್ಲಿ ಮಹಿಳೆಯೊಬ್ಬಳನ್ನು ಬಂಧಿಸಿಡಲಾಗಿತ್ತು. ಚುರುಕಿನ ಕಾರ್ಯಾಚರಣೆಯಿಂದ ಕೊಯಮತ್ತೂರು ಪೊಲೀಸರು 22 ವರ್ಷ ವಯಸ್ಸಿನ ಬೆಂಗಳೂರು ಮೂಲದ ಮಹಿಳೆಯನ್ನು ರಕ್ಷಿಸಿ, ಇದೀಗ ಸರ್ಕಾರಿ ಮಹಿಳಾ ನಿವಾಸಕ್ಕೆ ಕಳುಹಿಸಿದ್ದಾರೆ.ಇಬ್ಬರನ್ನು ಬಂಧಿಸಿದ್ದಾರೆ.

ಖಚಿತ ಮಾಹಿತಿ ಮೇರೆಗೆ ಬುಧವಾರ ಮೇಟುಪಾಳ್ಯಂ ಉಪವಲಯದಲ್ಲಿ ಬರುವ ಕಲ್ಲಾರ್​ ಬಳಿಯ ಊಟಿ ರಸ್ತೆ ಬದಿಯಲ್ಲಿ ಇರುವ ಸರಣ್ಯ ಲಾಡ್ಜ್​ ಮೇಲೆ ಕೊಯಮತ್ತೂರು ಪೊಲೀಸರು ದಾಳಿ ನಡೆಸಿದ್ದರು.​ ಈ ವೇಳೆ ಪೊಲೀಸರು ಲಾಡ್ಜ್​ ಒಳಗಿದ್ದ ರಹಸ್ಯ ಕೋಣೆಯೊಂದನ್ನು ಪತ್ತೆ ಹಚ್ಚಿ ಅಲ್ಲಿಂದ ಮಹಿಳೆಯನ್ನು ರಕ್ಷಿಸಿದ್ದಾರೆ.

ಕೊನೆಗೂ ಕೋಣೆಯನ್ನು ಪತ್ತೆ ಮಾಡಿದ ಪೊಲೀಸರಿಗೆ ಅದರೊಳಗೆ 22 ವರ್ಷದ ಮಹಿಳೆ ಹಾಗೂ ಆಕೆಯನ್ನು ಹಿಡಿದಿಟ್ಟುಕೊಂಡಿದ್ದ ಮಹೇಂದ್ರನ್​ (46) ಮತ್ತು ಗಣೇಶನ್​ (36) ಪತ್ತೆಯಾಗಿದ್ದರು. ಇದೀಗ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಹಾಗೂ ಲಾಡ್ಜ್​ ಅನ್ನು ಸೀಲ್​ ಮಾಡಲಾಗಿದೆ.

- Advertisement -

Latest News

error: Content is protected !!