Tuesday, May 14, 2024
Homeತಾಜಾ ಸುದ್ದಿಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ದುರಸ್ತಿ ವಿಚಾರ: ಹತ್ತು ದಿನದೊಳಗೆ ಹೆದ್ದಾರಿ ಸುಸ್ಥಿತಿಗೆ ತರುವಂತೆ ಸಚಿವರ ತಾಕೀತು

ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ದುರಸ್ತಿ ವಿಚಾರ: ಹತ್ತು ದಿನದೊಳಗೆ ಹೆದ್ದಾರಿ ಸುಸ್ಥಿತಿಗೆ ತರುವಂತೆ ಸಚಿವರ ತಾಕೀತು

spot_img
- Advertisement -
- Advertisement -

ಬೆಂಗಳೂರು: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಹಾಸನ- ಸಕಲೇಶಪುರ ಮತ್ತು ಅಡ್ಡಹೊಳೆ ವ್ಯಾಪ್ತಿಯಲ್ಲಿ ಹೆದ್ದಾರಿಯು ತೀರಾ ಹದಗೆಟ್ಟಿರುವುದರಿಂದ ತಕ್ಷಣವೇ ಅಲ್ಲಿ ದುರಸ್ತಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಬೇಕೆಂದು ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ ಮತ್ತು ಇಂಧನ ಸಚಿವ ವಿ. ಸುನೀಲ್ ಕುಮಾರ್ ಅವರು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಲೋಕೋಪಯೋಗಿ ಸಚಿವರ ವಿಕಾಸಸೌಧದ ಕಚೇರಿಯಲ್ಲಿ ಇಂದು ಏರ್ಪಡಿಸಿದ್ದ ಸಭೆಯಲ್ಲಿ ಈ ಸಮಸ್ಯೆಯ ಬಗ್ಗೆ ಚರ್ಚಿಸಲಾಯಿತು.

ಈ ಶಿಥಿಲಗೊಂಡ ಹೆದ್ದಾರಿಯಿಂದಾಗಿ ವಾಹನಗಳಿಗೆ ಆ ಭಾಗದಲ್ಲಿ ಸಂಚರಿಸುವುದೇ ದುಸ್ತರವಾಗಿದೆ. ಸಾರ್ವಜನಿಕರಿಂದಲೂ ಈ ಬಗ್ಗೆ ವ್ಯಾಪಕವಾಗಿ ದೂರುಗಳು ಕೇಳಿ ಬಂದಿವೆ. ಆದ್ದರಿಂದ ಇನ್ನೆರಡು ದಿನಗಳೊಳಗಾಗಿ ಅಲ್ಲಿ ಸಮರೋಪಾದಿಯಲ್ಲಿ ದುರಸ್ತಿ ಕೆಲಸಗಳನ್ನು ಪ್ರಾರಂಭಿಸಬೇಕು ಮತ್ತು ಇನ್ನು ಹತ್ತು ದಿನಗಳ ಒಳಗಾಗಿ ಈ ಹೆದ್ದಾರಿಯನ್ನು ಒಂದು ಸುಸ್ಥಿತಿಗೆ ತರಬೇಕೆಂದು ಉಭಯ ಸಚಿವರೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಕಾಲಮಿತಿಯ ಗಡುವು ನೀಡಿದರು. ಈ ಹೆದ್ದಾರಿ ರಿಪೇರಿಗೆ ಸಂಬಂಧಪಟ್ಟ ಗುತ್ತಿಗೆದಾರರಿಗೂ ಈ ಬಗ್ಗೆ ಸೂಚಿಸಲಾಯಿತು. ಈ ಸೂಚನೆಯಂತೆ ನಡೆಸಲಾಗುವ ಕಾಮಗಾರಿಗಳನ್ನು ಖುದ್ದಾಗಿ ಪರಿಶೀಲಿಸಲು ಸದ್ಯದಲ್ಲಿಯೇ ಸ್ಥಳಕ್ಕೆ ಭೇಟಿ ನೀಡುವುದಾಗಿ ಉಭಯ ಸಚಿವರೂ ಸ್ಪಷ್ಟಪಡಿಸಿದರು.

.

- Advertisement -
spot_img

Latest News

error: Content is protected !!