Tuesday, May 21, 2024
Homeತಾಜಾ ಸುದ್ದಿಮದುವೆ ಮನೆಯಲ್ಲಿ ಅಡುಗೆಯಾತನ ನೀಚ ಬುದ್ಧಿ: ರೋಟಿಗೆ ಉಗುಳಿದಾತ ಈಗ ಅಂದರ್

ಮದುವೆ ಮನೆಯಲ್ಲಿ ಅಡುಗೆಯಾತನ ನೀಚ ಬುದ್ಧಿ: ರೋಟಿಗೆ ಉಗುಳಿದಾತ ಈಗ ಅಂದರ್

spot_img
- Advertisement -
- Advertisement -

ಮೀರತ್​: ಮದುವೆ ಮನೆಗೆ ಊಟಕ್ಕೆ ಹೋದಾಗ ಅಲ್ಲಿರುವ ಭಕ್ಷ್ಯ ಭೋಜನಗಳನ್ನು ಬಾಯಿ ಚಪ್ಪರಿಸಿಕೊಂಡು ತಿನ್ನದವರು ಯಾರಿದ್ದಾರೆ ಹೇಳಿ. ಆದ್ರೆ ಈ ವಿಡಿಯೋ ನೋಡಿದ್ರೆ ನೀವು ಊಟ ಮಾಡುವ ಮುನ್ನ ಹತ್ತು ಸಲ ಯೋಚಿಸ್ತೀರಾ ಅನ್ನೋದು ಮಾತ್ರ ಪಕ್ಕಾ…

ಹೌದು… ಉತ್ತರ ಪ್ರದೇಶದ ಮೀರತ್​ನಲ್ಲಿ ನಡೆದ ಮದುವೆಯಲ್ಲಿ ಅಡುಗೆ ಮಾಡುವಾಗ ತಂದೂರಿ ರೋಟಿ ಮೇಲೆ ಉಗಿಯುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ರೋಟಿ ಮೇಲೆ ಉಗುಳುವ ವಿಡಿಯೋ ವೈರಲ್​ ಆದ ಬೆನ್ನಲ್ಲೇ ರೋಟಿ ತಯಾರಕನನ್ನು ಬಂಧಿಸಲಾಗಿದೆ.

ಬಂಧಿತನನ್ನು ಸೊಹೈಲ್​ ಎಂದು ಗುರುತಿಸಲಾಗಿದೆ. ಈತ ಮದುವೆಯಲ್ಲಿ ಅಡುಗೆ ಮಾಡುವಾಗ ರೋಟಿಯನ್ನು ಒತ್ತಿದ ಬಳಿಕ ಅದನ್ನು ಸುಡುವ ಮುನ್ನ ಅದರ ಮೇಲೆ ಉಗುಳುವುದನ್ನು ವ್ಯಕ್ತಿಯೊಬ್ಬ ರಹಸ್ಯವಾಗಿ ವಿಡಿಯೋ ಮಾಡಿಕೊಂಡು ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

- Advertisement -
spot_img

Latest News

error: Content is protected !!