Friday, June 5, 2026
Homeತಾಜಾ ಸುದ್ದಿಪತ್ನಿಯ ಮೇಲಿನ ಸಿಟ್ಟನ್ನು ಕಡಿಮೆ ಮಾಡಿಕೊಳ್ಳಲು 280 ಕಿ.ಮೀ ನಡೆದ ಭೂಪ

ಪತ್ನಿಯ ಮೇಲಿನ ಸಿಟ್ಟನ್ನು ಕಡಿಮೆ ಮಾಡಿಕೊಳ್ಳಲು 280 ಕಿ.ಮೀ ನಡೆದ ಭೂಪ

- Advertisement -
- Advertisement -

ರೋಮ್: ಹೆಂಡತಿ ಜೊತೆಗೆ ಜಗಳ ಮಾಡಿಕೊಂಡು 48 ವರ್ಷದ ವ್ಯಕ್ತಿಯೊಬ್ಬ ಸಿಟ್ಟನ್ನು ಕಡಿಮೆ ಮಾಡಿಕೊಳ್ಳಲು ಮನೆಯಿಂದ ಕಾಲ್ ನಡಿಗೆಯಲ್ಲಿ 280 ಕಿಲೋಮೀಟರ್ ದೂರ ನಡೆದುಕೊಂಡು ಹೋದ ಘಟನೆ ಇಟಲಿಯಲ್ಲಿ ನಡೆದಿದೆ.

ಇಟಲಿಯಲ್ಲಿ ಕೊರೋನಾ ವೈರಸ್ ಲಾಕ್‍ಡೌನ್ ಇದ್ದ ಕಾರಣ ರಾತ್ರಿ 10 ಗಂಟೆಯಿಂದ ಬೆಳಗ್ಗೆ 5ರವರೆಗೂ ನೈಟ್ ಕಫ್ರ್ಯೂ ಜಾರಿಯಲ್ಲಿದೆ. ರಾತ್ರಿ ಈತ ನಡೆದುಕೊಂಡು ಹೋಗುತ್ತಿರುವುದು ಪೊಲೀಸರ ಗಮನಕ್ಕೆ ಬಂದಿದೆ. ಆಗ ಪೊಲೀಸರು ನಿಯಮವನ್ನು ಉಲ್ಲಂಘಿಸಿದ್ದಕ್ಕಾಗಿ ದಂಡ ವಿಧಿಸಿ ಒಂದು ಹೋಟೆಲ್‍ನಲ್ಲಿ ಉಳಿಸಿದ್ದರು. ನಂತರ ಮನೆಗೆ ಹಿಂದಿರುಗಿ ಬಂದು ಈತ ನಡೆದಿರುವ ಘಟನೆಯನ್ನು ಹಂಚಿಕೊಂಡಿದ್ದಾನೆ.

ಲಂಬಾರ್ಡಿಯಾದ ನನ್ನ ಮನೆಯಿಂದ ಬೊಲೋನಾ ಮಾರ್ಗವಾಗಿ ನಡೆದುಕೊಂಡು ಹೋಗಿದ್ದೆ. ಫಾನೋ ಎಂಬಲ್ಲಿ ಪೊಲೀಸರು ನನ್ನನ್ನು ತಡೆದರು. ಮಾರ್ಗ ಮಧ್ಯೆ ಭೇಟಿಯಾದವರು ನನಗೆ ತಿನ್ನಲು ಊಟ ನೀರು ಕೊಟ್ಟರು. ನಾನು ಪತ್ನಿಯ ಮೇಲಿರುವ ಸಿಟ್ಟನ್ನು ಕಡಿಮೆ ಮಾಡಿಕೊಳ್ಳಲು ನಡೆದುಕೊಂಡು ಹೋಗಿದ್ದೆ. ದಿನಕ್ಕೆ 40 ಮೈಲಿ ನಡೆಯುತ್ತಿದ್ದೆ ಎಂದು ಆತ ಹೇಳಿಕೊಂಡಿದ್ದಾನೆ. ಇತ್ತ ಪತ್ನಿ, ತನ್ನ ಪತಿ ಕಾಣುತ್ತಿಲ್ಲ ಎಂದು ಪೊಲೀಸರಲ್ಲಿ ದೂರು ದಾಖಲಿಸಿದ್ದಳು.

- Advertisement -

Latest News

error: Content is protected !!