Thursday, June 4, 2026
Homeಕರಾವಳಿಕೆಲಸಕ್ಕೆಂದು ಕುವೈತ್ ಗೆ ತೆರಳಿ ಸಂಕಷ್ಟಕ್ಕೆ ತೆರಳಿದ್ದ ಕಾರ್ಕಳದ ಯುವಕ ಮರಳಿ ಸುರಕ್ಷಿತವಾಗಿ ತವರಿಗೆ

ಕೆಲಸಕ್ಕೆಂದು ಕುವೈತ್ ಗೆ ತೆರಳಿ ಸಂಕಷ್ಟಕ್ಕೆ ತೆರಳಿದ್ದ ಕಾರ್ಕಳದ ಯುವಕ ಮರಳಿ ಸುರಕ್ಷಿತವಾಗಿ ತವರಿಗೆ

- Advertisement -
- Advertisement -

ಮಂಗಳೂರು: ಕೆಲಸಕ್ಕೆಂದು ಕುವೈತ್ ಗೆ ತೆರಳಿ ಸಂಕಷ್ಟಕ್ಕೆ ತೆರಳಿದ್ದ ಕಾರ್ಕಳದ ಯುವಕ ಮರಳಿ ತವರಿಗೆ ಸುರಕ್ಷಿತವಾಗಿ ತಲುಪಿದ್ದಾರೆ.

ಕಾರ್ಕಳ ನಿವಾಸಿ ಜಯೇಶ್‌ ಅವರಿಗೆ ಕುವೈಟ್‌ನಲ್ಲಿ ಮನೆ ಕೆಲಸದ ಉದ್ಯೋಗವಿದೆ ಎಂದು ಶೃಂಗೇರಿಯ ಸಚಿನ್‌ ಎಂಬಾತ ವೀಸಾ ಕಳುಹಿಸಿಕೊಟ್ಟಿದ್ದರು. ಅದನ್ನು ನಂಬಿದ ಜಯೇಶ್‌ ಕುವೈಟ್ ಗೆ ತೆರಳಿದ್ದರು.ಆದರೆ ಅಲ್ಲಿ ಅವರಿಗೆ ಹೇಳಿದ ಕೆಲಸ ನೀಡದೆ  ಕುರಿ, ಆಡು ಸಾಕುವ ಫಾರ್ಮ್ಹೌಸ್‌ನಲ್ಲಿ ಕೆಲಸಕ್ಕೆ ನಿಯೋಜಿಸಲಾಗಿತ್ತು. ದಿನಕ್ಕೆ ಸುಮಾರು 12ರಿಂದ 14 ಗಂಟೆ ದುಡಿಯಬೇಕಿತ್ತು ಊಟ, ತಿಂಡಿ ಸರಿಯಾಗಿ ನೀಡದೆ ದೈಹಿಕ ಹಲ್ಲೆ ಕೂಡ ನಡೆಸುತ್ತಿದ್ದರು ಎನ್ನಲಾಗಿದೆ.

 ಈ ಬಗ್ಗೆ ಜಯೇಶ್, ಸಚಿನ್‌ನನ್ನು ಸಂಪರ್ಕಿಸಿದರೂ ಸೂಕ್ತ ಸ್ಪಂದನೆ ದೊರೆತಿರಲಿಲ್ಲ.ಅನಂತರ ಜಯೇಶ್‌ ತುಳುಕೂಟದ ರೋಶನ್‌ ಮೂಲಕ ಮಂಜೇಶ್ವರ ಮೋಹನದಾಸ್‌ ಕಾಮತ್‌ ಅವರಿಗೆ ತಿಳಿಸಿದ್ದರು.ಇದೀಗ ಡಾ. ಆರತಿ ಕೃಷ್ಣ ಸಹಾಯದಿಂದ ಜಯೇಶ್ ಮಂಗಳೂರಿಗೆ ಬರುತ್ತಿದ್ದಾರೆ.

- Advertisement -

Latest News

error: Content is protected !!