Sunday, May 5, 2024
Homeತಾಜಾ ಸುದ್ದಿಪರಸ್ಪರ ಪ್ರೀತಿಸಿ ಅದ್ಧೂರಿಯಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ಯುವಕರು: ಶಾಸ್ತ್ರೋಕ್ತವಾಗಿ ನಡೆಯಿತು ಮದುವೆ ಕಾರ್ಯ

ಪರಸ್ಪರ ಪ್ರೀತಿಸಿ ಅದ್ಧೂರಿಯಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ಯುವಕರು: ಶಾಸ್ತ್ರೋಕ್ತವಾಗಿ ನಡೆಯಿತು ಮದುವೆ ಕಾರ್ಯ

spot_img
- Advertisement -
- Advertisement -

ಕೋಲ್ಕತ್ತಾ; ಯುವಕರಿಬ್ಬರು ಪರಸ್ಪರ ಪ್ರೀತಿಸಿ ಶಾಸ್ತ್ರೋಕ್ತವಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ಘಟನೆ ಕೋಲ್ಕತ್ತಾದಲ್ಲಿ ನಡೆದಿದೆ. ಅಭಿಷೇಕ್​ ರೇ ಮತ್ತು ಚೈತನ್ಯ ಶರ್ಮಾ ಎಂಬ ಇಬ್ಬರು ಯುವಕರು ಪ್ರೀತಿಸಿ‌ ವಿವಾಹವಾಗಿದ್ದಾರೆ.ಅವರ ಮದುವೆಯ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್​ ಆಗುತ್ತಿವೆ.

ದಂಪತಿ ಅರಿಷಿಣ ಶಾಸ್ತ್ರ ಮತ್ತು ವಿವಾಹ ಸಮಾರಂಭಗಳ ಮೂಲಕ‌ ಮಂತ್ರಗಳನ್ನು ಪಠಿಸಿ ಹಿಂದೂ ಸಂಪ್ರದಾಯದಂತೆ ವಿವಾಹವಾಗಿದ್ದಾರೆ. ವಿವಾಹದಲ್ಲಿ ಕುಟುಂಬಸ್ಥರು ಸಂಭ್ರಮದಲ್ಲಿ ಭಾಗವಹಿಸಿದ್ದಾರೆ.

ಮದುವೆಯ ಚಿತ್ರಗಳು ಮತ್ತು ವಿಡಿಯೊಗಳನ್ನು ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಳ್ಳಲಾಗಿದೆ. ಅಭಿಷೇಕ್​ ಧೋತಿ ಮತ್ತು ಕುರ್ತಾದಲ್ಲಿ ಸಾಂಪ್ರದಾಯಿಕ ಬಂಗಾಳಿ ವರನಂತೆ ಕಾಣಿಸಿಕೊಂಡರೆ, ಚೈತನ್ಯ ಶೆರ್ವಾನಿ ಧರಿಸಿದ್ದರು. ಇದೀಗ ಗೇ ಜೋಡಿಗಳಿಬ್ಬರ ಮದುವೆ ಸೋಷಿಯಲ್ ಮೀಡಿಯಾದಲ್ಲಿ ಹವಾ ಕ್ರಿಯೇಟ್ ಮಾಡಿದೆ.

- Advertisement -
spot_img

Latest News

error: Content is protected !!