Thursday, June 4, 2026
Homeತಾಜಾ ಸುದ್ದಿವೋಟ್ ಮಾಡಿ ಬ್ಯಾಲೆಟ್ ಪೇಪರ್ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಹರಿ ಬಿಟ್ಟ ಭೂಪ

ವೋಟ್ ಮಾಡಿ ಬ್ಯಾಲೆಟ್ ಪೇಪರ್ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಹರಿ ಬಿಟ್ಟ ಭೂಪ

- Advertisement -
- Advertisement -

ಕಲಬುರಗಿ: ಗ್ರಾಮ ಪಂಚಾಯತ್ ಮೊದಲ ಹಂತದ ಚುನಾವಣೆ ಇವತ್ತು ನಡೆದಿದೆ. ಆದರೆ ಕಲಬುರಗಿಯಲ್ಲಿ ಚುನಾವಣೆಯಲ್ಲಿ ಮತದಾನ ಮಾಡಿದ ಭೂಪನೊಬ್ಬ ಮತ ಚಲಾಯಿಸಿ ಬ್ಯಾಲೆಟ್ ಪೇಪರ್ ಫೋಟೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿದ್ದಾನೆ.

ಕಲಬುರಗಿ ತಾಲೂಕಿನ ಕಲ್ಲಹಂಗರಗಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಂಬಗಾ(ಬಿ) ಗ್ರಾಮದಲ್ಲಿ ಈ ಘಟನೆ ನಡೆದಿದೆ.ಮತದಾನದ ಗೌಪ್ಯತೆ ಕಾಪಾಡುವುದು ಮತದಾರನ ಕರ್ತವ್ಯ. ಆದರೆ, ಜಂಬಗಾ (ಬಿ) ಗ್ರಾಮದ ವ್ಯಕ್ತಿ ಮತಗಟ್ಟೆಯಲ್ಲಿ ತನ್ನ ಆಯ್ಕೆಯ ಅಭ್ಯರ್ಥಿಗೆ ಮತ ಮುದ್ರೆ ಒತ್ತಿ. ಅದರ ಫೋಟೋ ತೆಗೆದಿದ್ದಾನೆ. ಅಲ್ಲದೇ, ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿದ್ದು, ಅದು ವೈರಲ್ ಆಗುತ್ತಿದೆ.

ಇನ್ನು, ಮತದಾನ ಕೇಂದ್ರದಲ್ಲಿ ಮೊಬೈಲ್ ಗೆ ನಿಷೇಧವಿದೆ. ಆದರೂ, ಈತ ಮತಗಟ್ಟೆಯೊಳಗೆ ಮೊಬೈಲ್ ತೆಗೆದುಕೊಂಡು ಹೋಗಿದ್ದು ಸಹ ಅಚ್ಚರಿ ತರಿಸಿದೆ.

- Advertisement -

Latest News

error: Content is protected !!