Wednesday, May 15, 2024
Homeತಾಜಾ ಸುದ್ದಿಎಂಐ 10ಟಿ ಪ್ರೋ ಫೋನ್ ಇಲ್ಲದೆ ಮದುವೆಯಾಗುವುದಿಲ್ಲ ಸಿಗೋವರೆಗೂ ಮದುವೆಯಾಗಲ್ಲ ಅಂದ ಯುವಕ: ಕೊನೆಗೆ ಯುವಕನ...

ಎಂಐ 10ಟಿ ಪ್ರೋ ಫೋನ್ ಇಲ್ಲದೆ ಮದುವೆಯಾಗುವುದಿಲ್ಲ ಸಿಗೋವರೆಗೂ ಮದುವೆಯಾಗಲ್ಲ ಅಂದ ಯುವಕ: ಕೊನೆಗೆ ಯುವಕನ ಆಸೆ ಈಡೇರಿಸಿದ ಕಂಪನಿ

spot_img
- Advertisement -
- Advertisement -

ಬೆಂಗಳೂರು: ಕೆಲವರು ತಮಗೆ ಬೇಕಾದ ವಸ್ತುವನ್ನು ಪಡೆಯಲು ಏನೆಲ್ಲಾ ಸರ್ಕಸ್ ಮಾಡ್ತಾರೆ ಅನ್ನೋದನ್ನು ನೋಡಿರ್ತೀವಿ. ಆದರೆ ಇಲ್ಲೊಬ್ಬ ಆಸಾಮಿ ಮೊಬೈಲ್ ಫೋನ್ ಗಾಗಿ ಎಂತಹ ನಿರ್ಧಾರ ತೆಗದುಕೊಂಡಿದ್ದಾನೆ ಗೊತ್ತಾ? ಕೊನೆಗೆ ಅದಕ್ಕೆ ತಕ್ಕ ಪ್ರತಿಫಲ ಕೂಡ ಪಡೆದಿದ್ದಾನೆ.

ಎಂಐ ಫೋನುಗಳ ಅಭಿಮಾನಿಯಾಗಿರುವ ಕಮಲ್​ ಅಹಮದ್​ ಹೆಸರಿನ ಯುವಕ, ಡಿಸೆಂಬರ್​ 11ರಂದು ಟ್ವಿಟ್ಟರ್​ನಲ್ಲಿ ಒಂದು ಪೋಸ್ಟ್​ ಶೇರ್​ ಮಾಡಿದ್ದರು. ನನಗೆ ಎಂಐ 10ಟಿ ಪ್ರೋ ಮೊಬೈಲ್​ ಸಿಗುವವರೆಗೂ ನಾನು ಮದುವೆಯಾಗುವುದಿಲ್ಲ ಎಂದು ಟ್ವೀಟ್​ನಲ್ಲಿ ಹೇಳಿಕೊಂಡಿದ್ದರು.

ಆಶ್ಚರ್ಯವೆಂದರೆ, ಆತ ಈ ರೀತಿ ಟ್ವೀಟ್​ ಮಾಡಿ, ಕೇವಲ 10 ದಿನಕ್ಕೆ ಅಂದರೆ ಡಿಸೆಂಬರ್​ 21ಕ್ಕೆ ಶಾವೊಮಿ ಸಂಸ್ಥೆಯು ಯುವಕನಿಗೆ ಎಂಐ 10ಟಿ ಪ್ರೋ ಫೋನನ್ನು ಉಡುಗೊರೆಯಾಗಿ ಕಳುಹಿಸಿಕೊಟ್ಟಿದೆ. ಆ ಫೋನನ್ನು ಪಡೆದುಕೊಂಡಿರುವ ಯುವಕ, ಇದೊಂದು ಅದ್ಭುತವಾದ ಫೋನು ಎಂದು ಹೇಳಿದ್ದಾರೆ. ಫೋನನ್ನು ಸಂಸ್ಥೆ ಗಿಫ್ಟ್​ ಮಾಡಿರುವ ಬಗ್ಗೆ ಟ್ವಿಟ್ಟರ್​ನಲ್ಲಿ ಹೇಳಿಕೊಂಡಿದ್ದಾರೆ.

ಅದಾದ ನಂತರ ಯುವಕನ ಟ್ವೀಟ್​ನ್ನು ರಿಟ್ವೀಟ್​ ಮಾಡಿರುವ ಶಾವೊಮಿಯ ಉಪಾಧ್ಯಕ್ಷ ಮತ್ತು ಶಿಯೋಮಿ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಮನು ಕುಮಾರ್ ಜೈನ್, ‘ಈಗ ನೀವು ಮದುವೆಯಾಗಲು ಸಿದ್ಧರಿದ್ದೀರಿ ಎಂದು ನಾನು ಭಾವಿಸುತ್ತೇನೆ’ ಎಂದು ಹೇಳಿದ್ದಾರೆ.

- Advertisement -
spot_img

Latest News

error: Content is protected !!