Thursday, June 4, 2026
Homeತಾಜಾ ಸುದ್ದಿಬೆಂಗಳೂರಿನಲ್ಲಿ ಶವಸಂಸ್ಕಾರಕ್ಕೆ ಕಟ್ಟಿಗೆ ಸಿಗದೇ ಪರದಾಟ : ಅಂತ್ಯಕ್ರಿಯೆಗೆ ಸೌದ ಉಚಿತವಾಗಿ ನೀಡಿ ವ್ಯಕ್ತಿಯೊಬ್ಬರ ಸಮಾಜಸೇವೆ

ಬೆಂಗಳೂರಿನಲ್ಲಿ ಶವಸಂಸ್ಕಾರಕ್ಕೆ ಕಟ್ಟಿಗೆ ಸಿಗದೇ ಪರದಾಟ : ಅಂತ್ಯಕ್ರಿಯೆಗೆ ಸೌದ ಉಚಿತವಾಗಿ ನೀಡಿ ವ್ಯಕ್ತಿಯೊಬ್ಬರ ಸಮಾಜಸೇವೆ

- Advertisement -
- Advertisement -

ಬೆಂಗಳೂರು: ಬೆಂಗಳೂರಿನಲ್ಲಿ ಕೊರೊನಾದಿಂದಾಗಿ ಪರಿಸ್ಥಿತಿ ಯಾವ ರೀತಿ ಇದೆ ಅನ್ನೋದನ್ನು ನಾವು ನೀವು ನೋಡುತ್ತಲೇ ಇದ್ದೇವೆ. ಆಸ್ಪತ್ರೆಗಳಲ್ಲಿ ಬೆಡ್ ಗಳು ಸಿಗುತ್ತಿಲ್ಲ. ಆಕ್ಸಿಜನ್ ಸಿಗುತ್ತಿಲ್ಲ ಕೊನೆಗೆ ಸತ್ತವರ ಅಂತ್ಯಕ್ರಿಯೆಗೆ ಸ್ಮಶಾನದಲ್ಲಿ ಕ್ಯೂ, ಸೌದೆಗಾಗಿ ಪರದಾಟ.

ಹೀಗೆ ಅಂತ್ಯಕ್ರಿಯೆಗೆ ಸೌದೆಗಾಗಿ ಪರದಾಡುವವರಿಗೆ ವ್ಯಕ್ತಿಯೊಬ್ಬರು ಸಹಾಯ ಮಾಡಲು ಮುಂದೆ ಬಂದಿದ್ದಾರೆ. ಬೆಂಗಳೂರಿನ ಮಾಗಡಿ ರಸ್ತೆಯ ಎಂ. ಕೃಷ್ಣಣ್ಣ ಎಂಬವರು ಇಂಥದ್ದೊಂದು ವಿಭಿನ್ನ ಸಮಾಜ ಸೇವೆ ಮೂಲಕ ಗಮನ ಸೆಳೆಯುತ್ತಿದ್ದಾರೆ. ಒಂದಷ್ಟು ಸೌದೆಗಳನ್ನು ರಾಶಿ ಹಾಕಿ ಅಲ್ಲೊಂದು ಪೋಸ್ಟರ್ ಕೂಡ ನೇತು ಹಾಕಿದ್ದಾರೆ. ‘ಇಲ್ಲಿ ಶವಸಂಸ್ಕಾರಕ್ಕೆ ಸೌದೆಯನ್ನು ಉಚಿತವಾಗಿ ನೀಡಲಾಗುವುದು, ಟೆಂಪೋ ನೀವೇ ತರಬೇಕು..’ ಎಂಬ ಮಾಹಿತಿ ಇರುವ ಪೋಸ್ಟರ್​ನಲ್ಲಿ ಸಂಪರ್ಕಿಸಬೇಕಾದ ಮೊಬೈಲ್​ ಫೋನ್​ ಸಂಖ್ಯೆಗಳನ್ನೂ ನೀಡಲಾಗಿದೆ. ಒಟ್ಟಿನಲ್ಲಿ ಇದರಿಂದ ಸಂಕಷ್ಟದಲ್ಲಿರುವ ಒಂದಷ್ಟು ಮಂದಿಗೆ ಸಹಾಯ ಆಗುವಂತಿದೆ.

- Advertisement -

Latest News

error: Content is protected !!