Saturday, August 29, 2026
Homeತಾಜಾ ಸುದ್ದಿಅಕ್ಕ ತಂಗಿಯನ್ನು ವಿವಾಹವಾಗಿದ್ದ ವರ ಉಮಾಪತಿ ಈಗ ಪೊಲೀಸರ ಅತಿಥಿ

ಅಕ್ಕ ತಂಗಿಯನ್ನು ವಿವಾಹವಾಗಿದ್ದ ವರ ಉಮಾಪತಿ ಈಗ ಪೊಲೀಸರ ಅತಿಥಿ

- Advertisement -
- Advertisement -

ಕೋಲಾರ: ಇಲ್ಲಿನ ಮುಳಬಾಗಲು ತಾಲೂಕಿನ ವೆಂಗಮಡುಗು ಗ್ರಾಮದಲ್ಲಿ ಅಕ್ಕ,ತಂಗಿಯನ್ನು ಒಂದೇ ಮಂಟಪದಲ್ಲಿ ಮದುವೆಯಾಗಿದ್ದ ವರ ಉಮಾಪತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಸಹೋದರಿಯರಾದ ಸುಪ್ರಿಯಾ ಮತ್ತು ಲಲಿತಾ ಅವರನ್ನು ಚನ್ನಬಾಲೇಪಲ್ಲಿ ಗ್ರಾಮದ ಉಮಾಪತಿ ಮದುವೆಯಾಗಿದ್ದರು. ಸಹೋದರಿಯರಲ್ಲಿ ಲಲಿತಾ ಅಪ್ರಾಪ್ತಳಾದ ಕಾರಣ ಉಮಾಪತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಅಕ್ಕನಿಗೆ ಮಾತು ಬಾರದ ಕಾರಣ ಆಕೆಯನ್ನು ಮದುವೆಯಾಗಬೇಕೆಂದು ತಂಗಿ ಒತ್ತಾಯಿಸಿದ್ದಳು. ಮನೆಯವರೆಲ್ಲ ಸೇರಿ ಅಕ್ಕ, ತಂಗಿಯನ್ನು ಉಮಾಪತಿಗೆ ಕೊಟ್ಟು ಮದುವೆ ಮಾಡಿದ್ದರು. ಇವರ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಜಿಲ್ಲಾಧಿಕಾರಿ ಮದುವೆ ಕುರಿತು ಪರಿಶೀಲನೆ ನಡೆಸಲು ಸೂಚನೆ ನೀಡಿದ್ದು, ಅಧಿಕಾರಿಗಳ ಪರಿಶೀಲನೆ ವೇಳೆಯಲ್ಲಿ ಲಲಿತಾ ಅಪ್ರಾಪ್ತ ವಯಸ್ಕಳು ಎನ್ನುವುದು ಗೊತ್ತಾಗಿದ್ದು, ಹೀಗಾಗಿ ನಂಗಲಿ ಪೊಲೀಸ್ ಠಾಣೆಯಲ್ಲಿ ಉಮಾಪತಿ ಸೇರಿದಂತೆ 7 ಮಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎನ್ನಲಾಗಿದೆ.

- Advertisement -

Latest News

error: Content is protected !!