Wednesday, June 3, 2026
Homeಚಿಕ್ಕಮಗಳೂರುಚಿಕ್ಕಮಗಳೂರು; ಆಸ್ತಿ ಮಾರಾಟದಿಂದ ಬಂದ ಹಣದ ವಿಚಾರದಲ್ಲಿ ನಡೆದ ಜಗಳ ಕೊಲೆಯಲ್ಲಿ ಅಂತ್ಯ

ಚಿಕ್ಕಮಗಳೂರು; ಆಸ್ತಿ ಮಾರಾಟದಿಂದ ಬಂದ ಹಣದ ವಿಚಾರದಲ್ಲಿ ನಡೆದ ಜಗಳ ಕೊಲೆಯಲ್ಲಿ ಅಂತ್ಯ

- Advertisement -
- Advertisement -

ಚಿಕ್ಕಮಗಳೂರು; ಆಸ್ತಿ ಮಾರಾಟದಿಂದ ಬಂದ ಹಣದ ವಿಚಾರದಲ್ಲಿ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ‌ ಮೂಡಿಗೆರೆ ತಾಲೂಕಿನ ಮಧುಗುಂಡಿ ಗ್ರಾಮದಲ್ಲಿ ನಡೆದಿದೆ. ಆಸ್ತಿ ಮಾರಾಟ ಮಾಡಲು ಮಧ್ಯಸ್ಥಿಕೆಗೆ ಬಂದಿದ್ದ  ಕಾರ್ತಿಕ್ (45) ಎಂಬವರನ್ನು ಕೊಲೆ  ಮಾಡಲಾಗಿದೆ. 12 ಲಕ್ಷ ರೂಪಾಯಿ ಹಣದ ವಿಚಾರದಲ್ಲಿ ಜಗಳವಾಗಿ ಕೊಲೆಯಲ್ಲಿ ಅಂತ್ಯವಾಗಿದೆ.

ಕಾರ್ತಿಕ್ ರನ್ನು ಮಚ್ಚಿನಿಂದ ಹಲ್ಲೆ ನಡೆಸಿ ಆರೋಪಿ ಸಂತೋಷ್  ಕೊಲೆ ಮಾಡಿದ್ದಾನೆ. ಸಂತೋಷ್ ಗೆ ಸೇರಿದ ಜಮೀನನ್ನು ಮಾರಾಟ ಮಾಡಲು ಕಾರ್ತಿಕ್ ಮಧ್ಯಸ್ಥಿಕೆ ವಹಿಸಿದ್ದರು. ಇದೇ ವಿಚಾರವಾಗಿ ಜಗಳವಾಗಿ ಕಾರ್ತಿಕ್ ಮನೆಯಲ್ಲಿ ಮಚ್ಚಿನಿಂದ ಹಲ್ಲೆ ನಡೆಸಿ ಸಂತೋಷ್ ಕೊಲೆ ಮಾಡಿದ್ದಾನೆ. ಜಗಳ ಬಿಡಿಸಲು ಮಧ್ಯಪ್ರವೇಶ ಮಾಡಿದ ಕಾರ್ತಿಕ್ ತಂದೆ ತಾಯಿಗೂ ಹಲ್ಲೆ ಮಾಡಿದ್ದು ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.  

ಇನ್ನು ಮಚ್ಚಿನಿಂದ ಹಲ್ಲೆ ನಡೆಸಿ ನೇರವಾಗಿ ಪೊಲೀಸ್ ಠಾಣೆಗೆ ಹೋಗಿ ಸಂತೋಷ್ ಶರಣಾಗಿದ್ದಾನೆ. ಬಾಳೂರು‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!