Friday, May 3, 2024
Homeಕರಾವಳಿಬೆಳ್ತಂಗಡಿ:ಲೋ ಬಿಪಿಯಿಂದ ಹೃದಯಾಘಾತವಾಗಿ ವಿದ್ಯಾರ್ಥಿನಿ ನಿಧನ

ಬೆಳ್ತಂಗಡಿ:ಲೋ ಬಿಪಿಯಿಂದ ಹೃದಯಾಘಾತವಾಗಿ ವಿದ್ಯಾರ್ಥಿನಿ ನಿಧನ

spot_img
- Advertisement -
- Advertisement -

ಬೆಳ್ತಂಗಡಿ:ಅನಾರೋಗ್ಯದಿಂದ ಬಳಲುತ್ತಿದ್ದ ನರ್ಸಿಂಗ್ ವಿದ್ಯಾರ್ಥಿನಿ,: ಲೋ ಬಿಪಿಯಿಂದ ಹೃದಯಾಘಾತಕ್ಕೆ ವಿದ್ಯಾರ್ಥಿನಿ ಬಲಿ

ಬೆಳ್ತಂಗಡಿ: ಅನಾರೋಗ್ಯದಿಂದ ಬಳಲಿ ಚಿಕಿತ್ಸೆ ಪಡೆದು ಮನೆಯಲ್ಲಿದ್ದ ಯುವತಿ ಲೋ ಬಿಪಿ ಆಗಿ ಹೃದಯಾಘಾತಗಾಗಿ ಮೃತಪಟ್ಟ ಘಟನೆ ಆ 13 ರಂದು ನಡೆದಿದೆ.

ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮದ ಗಂಡಿಬಾಗಿಲು ಜಾತಿಮಾರು ನಿವಾಸಿ  ರಾಜು ದೇವಾಡಿಗ ಮತ್ತು ಸರೋಜ ದಂಪತಿಗಳ ಮಗಳು ಸುಮಾ (19) ಮೃತ ಯುವತಿ.

ಮಂಗಳೂರಿನ ಎಜೆ ಆಸ್ಪತ್ರೆಯಲ್ಲಿ ಮೊದಲ ವರ್ಷದ ನರ್ಸಿಂಗ್ ವಿದ್ಯಾಭ್ಯಾಸ ಮಾಡುತ್ತಿದ್ದ ವಿದ್ಯಾರ್ಥಿನಿ ಸುಮಾ ಮನೆಗೆ ಬಂದಿದ್ದಳು. ಆಗಸ್ಟ್ 9 ರಂದು ಅನಾರೋಗ್ಯದ ಕಾರಣದಿಂದ ಸ್ಥಳೀಯ ಆಸ್ಪತ್ರೆಗೆ ತೆರಳಿ ಮಾತ್ರೆಗಳನ್ನು ಪಡೆದು ಮನೆಗೆ ತೆರಳಿದ್ದಳು. ನಂತರ ಆಗಸ್ಟ್11 ರಂದು ಮತ್ತೆ ಅನಾರೋಗ್ಯ ಜಾಸ್ತಿಯಾದ ಕಾರಣ ಮಂಗಳೂರು ಆಸ್ಪತ್ರೆಗೆ ಚಿಕಿತ್ಸೆಗೆ ಹೋಗಿದ್ದು ಗುಣಮುಖವಾಗಿರುವ ಕಾರಣ ತನ್ನ ಅಕ್ಕನ ಮನೆ ಬಳ್ಳಮಂಜಕ್ಕೆ ತೆರಳಿದ್ದು. ಆಗಸ್ಟ್ 13 ರಂದು ಸಂಜೆ ಮತ್ತೆ ಅಸ್ವಸ್ಥಗೊಂಡಿದ್ದು ಮಂಗಳೂರು ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಲೋ ಬಿಪಿ ಉಂಟಾಗಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾಳೆ ಎನ್ನಲಾಗಿದೆ.

- Advertisement -
spot_img

Latest News

error: Content is protected !!