Saturday, October 31, 2026
Homeಕರಾವಳಿಮಂಗಳೂರುರಾಜ್ಯ ಸರಕಾರದಿಂದ ಹೈನುಗಾರರ ಹಿತ ಕಾಯುವ ನಿರ್ಧಾರ:ಸಂತೋಷ್ ಕುಮಾರ್ ಲಾಯಿಲ

ರಾಜ್ಯ ಸರಕಾರದಿಂದ ಹೈನುಗಾರರ ಹಿತ ಕಾಯುವ ನಿರ್ಧಾರ:ಸಂತೋಷ್ ಕುಮಾರ್ ಲಾಯಿಲ

- Advertisement -
- Advertisement -

ಬೆಳ್ತಂಗಡಿ: ಹಾಲಿನ ಹೊಸ ದರ ಹೆಚ್ಚಳವಾಗಲಿದ್ದು, 7 ರೂ. ನೇರವಾಗಿ ರೈತರಿಗೆ ಪಾವತಿಯಾಗಲಿದೆ. ಅವರ ಆದಾಯ ಲೀಟರ್‌ಗೆ 47 ರೂ.ಗೆ ಏರಿಕೆಯಾಗಲಿದ್ದು ರಾಜ್ಯ ಸರಕಾರ ಮಹತ್ವದ ನಿರ್ಧಾರ ಕೈಗೊಂಡಿರುವುದು ಸ್ವಾಗತಾರ್ಹ. ಹೈನುಗಾರಿಕೆಯನ್ನು ನಂಬಿ‌ ಬದುಕುವವರು ಪಶು ಆಹಾರದ ಬೆಲೆ ಏರಿಕೆ ಸೇರಿದಂತೆ ಉತ್ಪಾದನಾ ವೆಚ್ಚ ಏರಿಕೆ ಮತ್ತು ಬರಗಾಲದಿಂದ ಕಂಗೆಟ್ಟಿದ್ದ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಮಹತ್ವದ ನಿರ್ಧಾರ ಕೈಗೊಂಡಿದೆ‌. ಹಾಲಿನ ದರ ಏರಿಕೆಯ ಸಿಂಹಪಾಲು ನೇರವಾಗಿ ನೇರವಾಗಿ ಹೈನುಗಾರರ ಖಾತೆಗೆ ತಲುಪಲಿದೆ. ಈ ಮೂಲಕ ಹೈನುಗಾರಿಕೆ ನಂಬಿ ಬದುಕುತ್ತಿರುವ ರಾಜ್ಯದ ಲಕ್ಷಾಂತರ ಕುಟುಂಬಗಳಿಗೆ ಅನುಕೂಲವಾಗಲಿದೆ. ಇದು ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರಕ್ಕೆ ‌ಹೈನುಗಾರರ ಪರವಾಗಿ ಇರುವ ಕಾಳಜಿಯಾಗಿದ್ದು, ಜಿಲ್ಲೆಯ ಹೈನುಗಾರರ ಪರವಾಗಿ ರಾಜ್ಯ ಸರಕಾರಕ್ಕೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ದ.ಕ. ಜಿಲ್ಲಾ ಕೆ.ಡಿ.ಪಿ. ಸದಸ್ಯರಾದ ಸಂತೋಷ್ ಕುಮಾರ್ ಲಾಯಿಲ ತಿಳಿಸಿದ್ದಾರೆ.

- Advertisement -

Latest News

error: Content is protected !!