Saturday, June 6, 2026
Homeತಾಜಾ ಸುದ್ದಿಶಿವಮೊಗ್ಗದಲ್ಲಿ ಚೂರಿಯಿಂದ ಇರಿದು ಯುವಕನ ಕೊಲೆ

ಶಿವಮೊಗ್ಗದಲ್ಲಿ ಚೂರಿಯಿಂದ ಇರಿದು ಯುವಕನ ಕೊಲೆ

- Advertisement -
- Advertisement -

ಶಿವಮೊಗ್ಗ: ಚೂರಿಯಿಂದ ಇರಿದು ಯುವಕನನ್ನು ಕೊಲೆ ಮಾಡಿರುವ ಘಟನೆ ಶಿವಮೊಗ್ಗದ ಭದ್ರಾವತಿಯ ಹೊಸಮನೆ ಠಾಣಾ ವ್ಯಾಪ್ತಿಯ ಸಾಯಿನಗರದಲ್ಲಿ ನಡೆದಿದೆ.

ಕೋಡಿಹಳ್ಳಿ ನಿವಾಸಿ ನವೀನ್ ಕುಮಾರ್ (25) ಕೊಲೆಯಾದ ಯುವಕ. ಗಾರೆ ಕೆಲಸ ಮಾಡಿಕೊಂಡಿದ್ದ ನವೀನ್ ಕುಮಾರ್, ಈ ಹಿಂದೆ ಎರಡು ಕೇಸ್‌ನಲ್ಲಿ ಆರೋಪಿಯಾಗಿದ್ದ ಎನ್ನಲಾಗಿದೆ.ವ್ಯಕ್ತಿಯೋರ್ವನ ಬಳಿ ಮೊಬೈಲ್ ಅಡವಿಟ್ಟಿದ್ದ ಈತ, ಗೆಳೆಯ ಅರುಣ್ ಕುಮಾರ್ ಜತೆಯಲ್ಲಿ ಮೊಬೈಲ್ ಬಿಡಿಸಿಕೊಳ್ಳಲು ಸತ್ಯಸಾಯಿ ನಗರಕ್ಕೆ ಹೋಗಿದ್ದಾಗ ಗಲಾಟೆ ನಡೆದು ಬೆನ್ನಿಗೆ ಚೂರಿಯಿಂದ ಇರಿಯಲಾಗಿದೆ ಎನ್ನಲಾಗಿದೆ.ಘಟನೆಯಲ್ಲಿ ಗಂಭೀರವಾಗಿದ್ದ ನವೀನ್ ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿದ್ದಾನೆ ಎನ್ನಲಾಗಿದೆ.

ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.

- Advertisement -

Latest News

error: Content is protected !!