ಕೇರಳ:ಯುವಕನೊಬ್ಬ 2 ಗಂಟೆಯೊಳಗೆ ತನ್ನ ಕುಟುಂಬದ 6 ಮಂದಿಯನ್ನು ಕೊಂದು ತಾನು ವಿಷ ಸೇವಿಸಿ ಪೊಲೀಸರಿಗ ಶರಣಾದ ಘಟನೆ ಕೇರಳದ ತಿರುವನಂತಪುರಂನ ವೆಂಜರಮೂಡು ಎಂಬಲ್ಲಿ ನಡೆದಿದೆ. ಅಫಾನ್ ಕೊಲೆ ಮಾಡಿದ ಯುವಕ.

ಮೊದಲಿಗೆ ಆತ ಸೋಮವಾರ ಮಧ್ಯಾಹ್ನದ ವೇಳೆ ಪಂಗೋಡೆಯಲ್ಲಿ ವಾಸಿಸುತ್ತಿದ್ದ ತನ್ನ ಅಜ್ಜಿ ಸಲ್ಮಾ ಬೀವಿ (88) ಅನ್ನು ಆಕೆಯ ನಿವಾಸದಲ್ಲಿ ಕೊಚ್ಚಿ ಕೊಲೆ ಮಾಡಿದ್ದಾನೆ. ನಂತರ ಎಸ್.ಎನ್.ಪುರಂನಲ್ಲಿ ವಾಸಿಸುತ್ತಿದ್ದ ತನ್ನ ಚಿಕ್ಕಪ್ಪನ ನಿವಾಸಕ್ಕೆ ತೆರಳಿರುವ ಆತ, ತನ್ನ ಚಿಕ್ಕಪ್ಪ ಲತೀಫ್ ಹಾಗೂ ಚಿಕ್ಕಮ್ಮ ಶಹೀದಾರನ್ನು ಕೊಂದಿದ್ದಾನೆ. ಕೊನೆಗೆ ಪೆರುಮಳದಲ್ಲಿರುವ ತನ್ನ ನಿವಾಸಕ್ಕೆ ಮರಳಿರುವ ಆತ, 9ನೇ ತರಗತಿ ವಿದ್ಯಾರ್ಥಿಯಾದ ತನ್ನ ಕಿರಿಯ ಸಹೋದರ ಅಫ್ಸಾನ್ (14), ತಾಯಿ ಶೆಮಿ ಹಾಗೂ ಗೆಳತಿ ಫರ್ಸಾನಾ ಮೇಲೆ ದಾಳಿ ನಡೆಸಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ಈ ಆರು ಮಂದಿಯ ಪೈಕಿ, ಐದು ಮಂದಿ ಮೃತಪಟ್ಟಿದ್ದು, ಆತ ಈ ಅಪರಾಧ ಕೃತ್ಯವನ್ನು ಕೇವಲ ಎರಡು ಗಂಟೆಗಳೊಳಗೆ ನಡೆಸಿದ್ದಾನೆ ಎನ್ನಲಾಗಿದೆ. ತನ್ನ ಗೆಳತಿಯನ್ನು ಎಷ್ಟು ಭೀಕರವಾಗಿ ಕೊಂದಿದ್ದಾನೆ ಎಂದರೆ ಆಕೆಯ ಮುಖ ಗುರುತು ಸಿಗಲಾರದಷ್ಟು ಚಚ್ಚಿ ಚಚ್ಚಿ ಕೊಲೆ ಮಾಡಿದ್ದಾನೆ.ಐವರನ್ನು ಸಾಮೂಹಿಕವಾಗಿ ಹತ್ಯಾಕಾಂಡ ನಡೆಸಿದ ಬಳಿಕ ಹಂತಕ ಅಫಾನ್ ವೆಂಜರಮೂಡು ಪೊಲೀಸ್ ಠಾಣೆಗೆ ತೆರಳಿ ತಾನೇ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ. ಸ್ಥಳ ಪರಿಶೀಲನೆ ಬಳಿಕ ಐವರು ಶವವಾಗಿ ಸಿಕ್ಕಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.ಕೊಲೆಗೆ ಕಾರಣ ತಿಳಿದು ಬಂದಿಲ್ಲ.