Wednesday, July 15, 2026
Homeಅಪರಾಧಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ; ಕೋರ್ಟ್‌ಗೆ ದರ್ಶನ್‌, ಪವಿತ್ರಾ ಗೌಡ ಸೇರಿದಂತೆ 17 ಆರೋಪಿಗಳು ಹಾಜರು

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ; ಕೋರ್ಟ್‌ಗೆ ದರ್ಶನ್‌, ಪವಿತ್ರಾ ಗೌಡ ಸೇರಿದಂತೆ 17 ಆರೋಪಿಗಳು ಹಾಜರು

- Advertisement -
- Advertisement -

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನವಾಗಿ ಜಾಮೀನು ಪಡೆದಿರುವ ಎ1 ಪವಿತ್ರಾ ಗೌಡ, ಎ2 ದರ್ಶನ್‌ ಸೇರಿದಂತೆ ಎಲ್ಲ 17 ಮಂದಿ ಆರೋಪಿಗಳು ಮಂಗಳವಾರ ಫೆ.25 ಮಂಗಳವಾರದಂದು ಕೋರ್ಟಿಗೆ ಹಾಜರಾಗಿದ್ದಾರೆ.

ಜಾಮೀನು ಸಿಕ್ಕಿರುವ ಎಲ್ಲ 17 ಮಂದಿ ಆರೋಪಿಗಳು, ಜಾಮೀನಿಗೆ ಹಾಕಿರುವ ಷರತ್ತಿನಂತೆ ಆರೋಪಿಗಳು ಪ್ರತಿ ವಿಚಾರಣೆಗೆ ಹಾಜರಾಗಬೇಕೆನ್ನುವುದಿದೆ. ಅದರಂತೆ ಎಲ್ಲ ಆರೋಪಿಗಳು ಬೆಂಗಳೂರಿನ 57ನೇ ಸಿಸಿಹೆಚ್ ಕೋರ್ಟ್‌ಗೆ ವಿಚಾರಣೆಗೆ ಹಾಜರಾಗಿದ್ದರು. ಕೋರ್ಟ್‌ನಲ್ಲಿ ಆರೋಪಿಗಳು ತಮ್ಮ ಹೇಳಿಕೆಯನ್ನು ನೀಡಿದ್ದಾರೆ. ಮುಂದಿನ ವಿಚಾರಣೆಯನ್ನು ಏ.8ಕ್ಕೆ ಕೋರ್ಟ್‌ ಮುಂದೂಡಿದೆ.

ಇನ್ನು ವಿಚಾರಣೆಗೆ ಬಂದಿದಂತಹ ದರ್ಶನ್‌ ಹಾಗೂ ಪವಿತ್ರಾ ಗೌಡ ಕೋರ್ಟ್‌ನಲ್ಲಿ ಮುಖಾಮುಖಿಯಾದರೂ ಮಾತನಾಡದೆ ತೆರಳಿದ್ದಾರೆ ಎನ್ನಲಾಗಿದೆ.

- Advertisement -

Latest News

error: Content is protected !!