Sunday, May 19, 2024
Homeತಾಜಾ ಸುದ್ದಿಸಾಲ ತೀರಿಸಲಾಗದೇ ಪರದಾಟ: ಕೊನೆಗೆ ಕಿಡ್ನಿ ಮಾರಾಟಕ್ಕಿದೆ ಎಂದು ಜಾಹೀರಾತು ನೀಡಿದ ಯುವಕ

ಸಾಲ ತೀರಿಸಲಾಗದೇ ಪರದಾಟ: ಕೊನೆಗೆ ಕಿಡ್ನಿ ಮಾರಾಟಕ್ಕಿದೆ ಎಂದು ಜಾಹೀರಾತು ನೀಡಿದ ಯುವಕ

spot_img
- Advertisement -
- Advertisement -

ಜಮ್ಮುಕಾಶ್ಮೀರ​: ಮಾಡಿದ ಸಾಲ ತೀರಿಸಲಾಗದೇ ಕೊನೆಗೆ ಬೇರೆ ದಾರಿ ಕಾಣದೇ ತನ್ನ ಕಿಡ್ನಿ ಮಾರಾಟಕ್ಕಿದೆ ಎಂದು ವ್ಯಕ್ತಿಯೊಬ್ಬ ಜಾಹೀರಾತು ನೀಡಿದ ಮನಕಲುಕುವ ಘಟನೆ ಜಮ್ಮು ಕಾಶ್ಮೀರದಲ್ಲಿ ನಡೆದಿದೆ.

ಕಾಶ್ಮೀರದ ಕುಲ್ಗಾಮ್​ ನಿವಾಸಿ ಸಬ್ಜರ್ ಅಹ್ಮದ್ ಖಾನ್(28) ಈ ರೀತಿ ಜಾಹೀರಾತು ನೀಡಿರುವ ವ್ಯಕ್ತಿ. ಈತ ಕುಲ್ಗಾಮ್​ನಲ್ಲಿ ಕಾರಿನ ಸೇಲ್ಸ್​ಮೆನ್​ ಆಗಿ ಕೆಲಸ ಮಾಡುತ್ತಿದ್ದಾನೆ. ಕಾಶ್ಮೀರದಲ್ಲಿ ಆರ್ಟಿಕಲ್​ 370 ರದ್ದು ಮಾಡಿದ ನಂತರ ನಿಷೇಧಾಜ್ಞೆ ಹೇರಲಾಗಿತ್ತು. ಅದು ಮುಗಿದು ಕೆಲವೇ ತಿಂಗಳಲ್ಲಿ ಕರೊನಾ ಲಾಕ್​ಡೌನ್ ಜಾರಿ ಮಾಡಲಾಯಿತು. ಇದೇ ಕಾರಣದಿಂದಾಗಿ ಸುಮಾರು ತಿಂಗಳುಗಳಿಂದ ಸಬ್ಜರ್​ನ ವ್ಯವಹಾರ ಸ್ಥಗಿತವಾಗಿದೆ. ವ್ಯಾಪಾರದಲ್ಲಿ ಸಂಪೂರ್ಣ ನಷ್ಟವಾಗಿದೆ.

ಆದ ನಷ್ಟವನ್ನು ತುಂಬಿಸುವ ಸಲುವಾಗಿ ಸಬ್ಜರ್​ ಬ್ಯಾಂಕ್​ನಲ್ಲಿ 61 ಕೋಟಿ ರೂಪಾಯಿ ಸಾಲ ಮಾಡಿದ್ದಾನೆ. ಉಳಿದಂತೆ ಸ್ನೇಹಿತರು, ಪರಿಚಯಸ್ಥರ ಬಳಿ 30 ಕೋಟಿ ರೂಪಾಯಿ ಸಾಲ ಮಾಡಿದ್ದಾನೆ. ಒಟ್ಟು 91 ಕೋಟಿ ರೂಪಾಯಿ ಸಾಲ ಬಾಕಿಯಿದೆ. ಇದೀಗ ಸಾಲದ ಹೊರೆ ಹೆಚ್ಚಾಗಿದ್ದು, ಅದನ್ನು ತೀರಿಸಲು ಯಾವುದೇ ಮಾರ್ಗ ಉಳಿದಿಲ್ಲ. ಅದೇ ಕಾರಣದಿಂದಾಗಿ ನನ್ನ ಕಿಡ್ನಿ ಮಾರಲು ಮುಂದಾಗಿದ್ದೇನೆ ಎಂದು ಆತ ತಿಳಿಸಿದ್ದಾನೆ.

ಈತನ ಜಾಹೀರಾತನ್ನು ನೋಡಿ ಹಲವರು ಕಿಡ್ನಿ ಬೇಕೆಂದು ಕರೆ ಮಾಡಿದ್ದಾರಂತೆ. ಒಬ್ಬ ವ್ಯಕ್ತಿ 20 ಲಕ್ಷ ರೂಪಾಯಿ ಕೊಡುವುದಾಗಿ ಹೇಳಿದ್ದರೆ, ಇನ್ನೊಬ್ಬ 25 ಲಕ್ಷ ರೂಪಾಯಿ ಕೊಡುವುದಾಗಿ ಹೇಳಿದ್ದಾನಂತೆ. ಆದರೆ ಇನ್ನೂ ಒಳ್ಳೆಯ ಆಫರ್​ ಬರಬಹುದು ಎಂದು ಕಾಯುತ್ತಿರುವುದಾಗಿ ಸಬ್ಜರ್​ ಹೇಳಿದ್ದಾನೆ

- Advertisement -
spot_img

Latest News

error: Content is protected !!